ಫಲಿತಾಂಶ ಪಟ್ಟಿಯಲ್ಲಿ ದೋಷ:ಡಿಸ್ಟಿಂಕ್ಷನ್ ವಿದ್ಯಾರ್ಥಿನಿಗೆ ಅನ್ಯಾಯ -Times Of Karkala

 

ಕಾರ್ಕಳ: ಫಲಿತಾಂಶ ಪಟ್ಟಿಯಲ್ಲಿ ದೋಷ-ಡಿಸ್ಟಿಂಕ್ಷನ್ ವಿದ್ಯಾರ್ಥಿನಿಗೆ ಅನ್ಯಾಯ -Times Of Karkala

ಕಾರ್ಕಳ,ಆ 21 :ಪದವಿಪೂರ್ವ ಶಿಕ್ಷಣ ಮಂಡಳಿಯ ತಪ್ಪಿನಿಂದಾಗಿ ತಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅನ್ಯಾಯಕ್ಕೊಳಗಾಗಿದ್ದಾಳೆ ಎಂದು ಕಾರ್ಕಳದ ಕೆ ಇ ಎಂ ಎಸ್ ಶಿಕ್ಷಣ ಸಂಸ್ಥೆ ಆರೋಪಿಸಿದೆ.

ದ್ವಿತೀಯ ಪಿಯು ವಾಣಿಜ್ಯಶಾಸ್ತ್ರ ವಿದ್ಯಾರ್ಥಿನಿ ಝುಹಾ ಫಿರ್ದೌಜ್ ಗೆ ಪಲಿತಾಂಶ ಪ್ರಕಟಗೊಂಡ ದಿನ ಆಘಾತ  ಕಾದಿತ್ತು. ಆಕೆ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ, ಪಲಿತಾಂಶ ಪಟ್ಟಿಯಲ್ಲಿ ಅರ್ಥಶಾಸ್ತ್ರದಲ್ಲಿ  ಕಡಿಮೆ ಅಂಕ  ದಾಖಲಾಗಿತ್ತು. ಐದು ವಿಷಯದಲ್ಲಿ  ಉತ್ತಮ ಅಂಕ ಗಳಿಸಿದ್ದ ಫಿರ್ದೌಜ್ ಗೆ ಅರ್ಥಶಾಸ್ತ್ರದಲ್ಲಿ 82 ರ ಬದಲಿಗೆ 49 ಅಂಕ ಬಂದಿತ್ತು. ಅಂಕಗಳನ್ನು ನಮೂದಿಸುವಾಗ ಇಲಾಖೆ ತಪ್ಪೆಸಗಿದ್ದರಿಂದಾಗಿ ಈ ಪ್ರಮಾದ ಆಗಿತ್ತು. ಉತ್ತರ ಪತ್ರಿಕೆಯನ್ನು ಆನ್ಲೈನ್ ನಲ್ಲಿ  ತರಿಸಿಕೊಂಡಾಗ ಅಂಕಪಟ್ಟಿಯಲ್ಲಿ ವ್ಯತ್ಯಾಸವಾಗಿರುವುದು ಬೆಳಕಿಗೆ ಬಂತು. ಉತ್ತರ ಪತ್ರಿಕೆಯನ್ನು ಪರಿಶೀಲಿಸಿದ ಉಪನ್ಯಾಸಕರು ವಿದ್ಯಾರ್ಥಿನಿಗೆ ಇನ್ನೂ ಎಂಟು ಅಂಕಗಳು ಹೆಚ್ಚು  ಬರಬೇಕಿತ್ತು ಎಂದಿದ್ದಾರೆ.   

ಆಕೆಯ  ಅಂಕ ದಾಖಲಾತಿಯಲ್ಲಿ   ವ್ಯತ್ಯಾಸವಾಗದೆ   ಇರುತ್ತಿದ್ದರೆ, ಫಿರ್ದೌಜ್ ಕಾಲೇಜಿನ ಫಲಿತಾಂಶ ಪಟ್ಟಿಯಲ್ಲಿ ಮೊದಲ ಸಾಲಿನ ನಾಲ್ಕನೇ ಸ್ಥಾನ  ಪಡೆಯುತ್ತಿದ್ದಳು ಎಂದು ಪೋಷಕರು  ಹೇಳಿದ್ದಾರೆ. 

 

ಜಾಹೀರಾತು









 


  









Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget