ಬೆಳ್ಮಣ್:ಮೊಬೈಲ್ ಬುಕ್ ಮಾಡಿದಾಗ ಬಂದದ್ದು ಹನುಮಾನ್ ಚಾಲೀಸಾ!-Times of Karkala
ಬೆಳ್ಮಣ್,ಆ,29: ಯುವತಿಯೋರ್ವಳ ಮೊಬೈಲ್ ಕರೆಗೆ ಮರುಳಾಗಿ ಚಾಲಕನೋರ್ವ ಹಣ ಕಳೆದುಕೊಂಡ ಘಟನೆ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯಲ್ಲಿ ವರದಿಯಾಗಿದೆ.ಯುವತಿಯೋರ್ವಳು ಮೊಬೈಲ್ ಗೆ ಕರೆ ಮಾಡಿ 12000ರೂ ಯ ಸ್ಯಾಮ್ ಸ್ಯಾಂಗ್ ಮೊಬೈಲ್ 2,000 ರೂ ಗೆ ಸಿಗುತ್ತದೆ. ಕೂಡಲೇ ಬುಕ್ ಮಾಡಿ ಎಂದಿದ್ದಳು. ನಿಜವೆಂದು ನಂಬಿದ್ದ ಚಾಲಕ 2,000ರೂ ಕೊಟ್ಟು ಬುಕ್ ಮಾಡಿದ್ದ.
ಕೆಲ ದಿನಗಳ ನಂತರ ಮನೆಗೆ ರಿಜಿಸ್ಟರ್ಡ್ ಪೋಸ್ಟ್ ನಲ್ಲಿ ಪಾರ್ಸೆಲ್ ಕೂಡ ಬಂದಿತ್ತು. ಖುಷಿಯಿಂದ ಪಾರ್ಸೆಲ್ ಬಿಚ್ಚಿ ನೋಡಿದರೆ ಅದರೊಳಗೆ ದಕ್ಕಿದ್ದು ಹನುಮಾನ್ ಚಾಲೀಸಾ ಹಾಗು ಒಂದು ರೋಲ್ಡ್ ಗೋಲ್ಡ್ ಸರ.ಮೋಸ ಹೋದ ವ್ಯಕ್ತಿ ಮತ್ತೆ ಯುವತಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್!
ಕಳೆದುಕೊಂಡ ಹಣಕ್ಕೆ ಕೈ ಕೈ ಹಿಸುಕಿಕೊಳ್ಳುವ ಪಾಡು ಇದೀಗ ಚಾಲಕನದ್ದು.
Post a comment