ಕಾರ್ಕಳ:ಪರಮ್ "ಕರ್ಣ ಕುಂಡಲ ಧಾರಿಣಿ"ಯ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಹೇಳಿದ್ದು ಹೀಗೆ...-Times of karkala

ಕಾರ್ಕಳ:ಪರಮ್ "ಕರ್ಣ ಕುಂಡಲ ಧಾರಿಣಿ"ಯ ಬಗ್ಗೆ ನಿರ್ದೇಶಕ  ಸಿಂಪಲ್ ಸುನಿ ಹೇಳಿದ್ದು ಹೀಗೆ...

ಚಮಕ್, ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ, ಆಪರೇಷನ್ ಅಲಮೇಲಮ್ಮ ನಿರ್ದೇಶಕ ಸುನಿ ಸರ್ ಮಾತುಗಳು. 

ಪರಮ್ ಪರಿಚಯ ಹೇಗೆ ಎಂದು ನೆನಪಿಲ್ಲ. ಆದರೆ ಆತನ  ಕವಿತೆಗಳು, ಬರಹಗಳು ನನಗಿಷ್ಟ. ಆದ್ದರಿಂದಲೇ  ಪೋನ್ ನಂಬರ್ ಪರಮ್ ರೈಟರ್ ಕಾರ್ಕಳ ಎಂದೇ ಸೇವಾಗಿದೆ. ಇನ್ನು ಇವರ ಮೊದಲ ಪುಸ್ತಕ "ಕರ್ಣ ಕುಂಡಲ ಧಾರಿಣಿ"   ಎಲ್ಲಾ ಜನರಿಗೆ ಇಷ್ಟವಾಗುವ ಲವ್ ಫೈಲ್ಯೂರ್ ಕತೆಯನ್ನು ತನ್ನ ಸ್ನೇಹಿತನ ರೂಪಾಂತರದಲ್ಲಿ, ಪ್ರಯೋಗಾತ್ಮಕವಾಗಿ,  ಇಂದು ಹಾಗೂ ಹಿಂದಿನ ಒಂದೊಂದು ದೃಶ್ಯಗಳನ್ನು ಜೋಡಣೆ ಕೊಟ್ಟು ಸೊಗಸಾಗಿ ಬರೆದಿದ್ದಾರೆ. ಇವರು ಹೋಲಿಸಿ ಬರೆಯುವ ಸಾಲುಗಳು ಅಮೋಘ.

"ಕಣ್ಣಿನ ಹನಿಗಳ ಸಾಲುಗಳನ್ನು ಕಣ್ಣೀರ ಪಥ ಸಂಚಲನವೆಂದೂ, ಕಪ್ಪು ರಸ್ತೆಗೆ ಬೀದಿ ದೀಪದ ಬೆಳಕು ಬಿದ್ದಾಗ ಡಾಂಬರಿನ ದಾರಿ ನೈಜ ಬಣ್ಣ ಕಳಚಿ ಬಣ್ಣದ ಸೀರೆ ಉಡಿಸಿದಂತೆ" ಇನ್ನಿತ್ಯಾದಿ ಸಾಲುಗಳು ಓದುವುದಕ್ಕೆ ಹಾಗೂ ಕಲ್ಪನೆಗೆ ಖುಷಿ ಕೊಡುತ್ತವೆ. 

ಕತೆ ಸಾಗಿದಂತೆ ನಾವು ಪರಮ್ ಕಣ್ಣಿನಿಂದ ಕರ್ಣನ ಜೀವನವನ್ನು ಪೂರ್ಣ ಆವರಿಸಿಕೊಳ್ಳುತ್ತೇವೆ. ಆತನ ಒಡನಾಟಗಳು,ಪರಿಪಾಟಲುಗಳು,ನೋವುಗಳು ನಮ್ಮದಾಗುತ್ತವೆ.

ಕಾರ್ಕಳ ಗೊತ್ತಿದ್ದವರಿಗಂತೂ ಕತೆಯಲ್ಲಿನ ಭಾಗ ರಾಮಸಮುದ್ರ, ಶ್ರೀ ವೆಂಕಟರಮಣ ದೇವಸ್ಥಾನ, ಮುಂಡ್ಲಿ ಸುವರ್ಣಾನದಿ, ರಾಘವೇಂದ್ರ ಮಠದ ಸ್ಟಾಪ್, ಟೈಗರ್ ಸರ್ಕಲ್, ಬಸದಿ, ಗುಮ್ಮಟ ಬೆಟ್ಟದ ಹಾದಿ, ಮಾಳ, ಬಜಗೋಳಿ, ಶೃಂಗೇರಿಯ ಸಿರಿಮನೆ ಫಾಲ್ಸ್ ಎಲ್ಲವೂ ನಿಮಗೆ ಸುಂದರ ಸೊಬಗಿನ ಚೌಕಟ್ಟನ್ನು ಕಲ್ಪಿಸಿ ಕೊಡುತ್ತದೆ. ಮೊದಲಿನಿಂದಲೂ ಇಬ್ಬರ ಜೀವನದಲ್ಲಿ ಸಾಗುವ ಕತೆಗೆ ಅಂತ್ಯದಲ್ಲಿ ಒಂದಷ್ಟು ಸಿನಿಮ್ಯಾಟಿಕ್ ಟ್ವಿಸ್ಟ್ ಗಳು ಸಿಗುತ್ತವೆ. ಇದು ಕೆಲವರಿಗೆ ಸ್ವಲ್ಪ  ನಿರಾಳಭಾವ ತಂದು ಖುಷಿ ಕೊಡಬಹುದು. ಇನ್ನು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಒಟ್ಟಾರೆ ಕತೆಯ ವಿಶ್ಲೇಷಣೆ ಮುದ ನೀಡುತ್ತದೆ. 

ಪರಮ್ ನಿಂದ ಇನ್ನೂ ಹೆಚ್ಚೆಚ್ಚಿಗೆ ಕತೆಗಳು ಬರಲಿ. ಆತನು ಓದುಗರೆಲ್ಲರ ಫೆವರಿಟ್ ರೈಟರ್ ಆಗಲಿ.

ಶುಭಹಾರೈಕೆಗಳು

-ಸಿಂಪಲ್ ಸುನಿ

 

ಜಾಹೀರಾತು


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget