ಕುಂದಾಪುರ: ಶವ ಅದಲು ಬದಲು: ಆಸ್ಪತ್ರೆಯವರ ಅಚಾತುರ್ಯ-Times Of Karkala
ಕುಂದಾಪುರ ಆ 23; ಆಸ್ಪತ್ರೆಯವರ ಅಚಾತುರ್ಯದಿಂದ ಶವ ಅದಲು ಬದಲಾದ ಘಟನೆಯೊಂದು ಶನಿವಾರ ಬೆಳಕಿಗೆ ಬಂದಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಶವದ ಬದಲಿಗೆ ಖಾಸಗಿ ಆಸ್ಪತ್ರೆಯವರು ಯುವಕನ ಮೃತದೇಹವನ್ನು ಮನೆಗೆ ರವಾನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮನೆಯವರು ಆಸ್ಪತ್ರೆಯ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ನೆರಂಬಳ್ಳಿಯ 60 ವರ್ಷದ ವ್ಯಕ್ತಿಯೊರ್ವರು ಶನಿವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಅಂತ್ಯಕ್ರಿಯೆ ನಡೆಸಲು ಹಿಂದೂ ರುದ್ರ ಭೂಮಿಗೆ ತಂದ ಸಂದರ್ಭ ಮಣಿಪಾಲ ಆಸ್ಪತ್ರೆಯ ಎಡವಟ್ಟು ಬಯಲಿಗೆ ಬಂದಿದೆ.
ಇಂದು ಬೆಳಿಗ್ಗೆ ಮೃತ ದೇಹ ತಂದಾಗ ಸಂಬಂಧಿಕರಿಗೆ ಅಂತಿಮ ದರ್ಶನಕ್ಕೆ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳೀಯರೆಲ್ಲ ಪ್ರತಿಭಟನೆ ನಡೆಸಿದಾಗ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮೃತ ದೇಹ ಇನ್ನೊಂದು ಆಂಬ್ಯುಲೆನ್ಸ್ ನಲ್ಲಿ ಬರುತ್ತಿದೆಂದು ಹೇಳಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.
Post a comment