ಮೂಡುಬಿದಿರೆ:ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಹೊಡೆದಾಟ
ಮೂಡಬಿದಿರೆ,ಆ: ವಾಲ್ಪಾಡಿ ಗ್ರಾಂ ಪಂಚಾಯತ್ ವ್ಯಾಪ್ತಿಯ ಪೇರಿಬೆಟ್ಟುವಿನಲ್ಲಿ ಮರ ಕಡಿಯುವ ವಿಚಾರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಹೊಡೆದಾಟವಾಗಿದ್ದು ಎರಡೂ ಗುಂಪುಗಳ ಮೇಲೆ ಪ್ರಕರಣ ದಾಖಲಾಗಿದೆ.
ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಡೆಯುತ್ತಿರುವಾಗ ಒಂದು ಗುಂಪಿನವರು ಮರ ಕಡಿದಿದ್ದರೆ. ಅಲ್ಲಿಗೆ ಬಂದ ಇನ್ನೊಂದು ಪಕ್ಷದ ಕಾರ್ಯಕರ್ತ ಈ ಕೃತ್ಯದ ಫೋಟೋ ತೆಗೆದು ತಕರಾರು ತೆಗೆದು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದರಿಂದ ಕುಪಿತರಾದ 10 ಮಂದಿ ಕಾರ್ಯಕರ್ತರ ತಂಡ ಗಣೇಶ್ ಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ. ಗಣೇಶ್ ಗೌಡರ ವಿರುದ್ಧ ಮೋಹನ್ ಗೌಡ ಹಾಗು ಮೋಹನ್ ಗೌಡರ ವಿರುದ್ಧ ಗಣೇಶ್ ಗೌಡ ಮೂಡಬಿದಿರೆ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
Post a comment