ಸೋನಿಯಾಗೆ ಮೊಯ್ಲಿ ಬರೆದ ಪತ್ರ ಲೀಕ್-Times Of Karkala
ಬೆಂಗಳೂರು,ಆ 25:ನಮ್ಮ ಪತ್ರದ ಉದ್ದೇಶ ಕಾಂಗ್ರೆಸ್ ಪಕ್ಷದ ನಾಯಕತ್ವ ಪ್ರಶ್ನಿಸುವುದಲ್ಲ. ಪಕ್ಷದಲ್ಲಿ ಬದಲಾವಣೆ ಕೋರಿ ಪತ್ರ ಬರೆದದ್ದು. ಪಕ್ಷ ಸಂಘಟನೆಯೇ ನಮ್ಮ ಗುರಿ ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯಿಲಿ ತಾವು ಕಾಂಗ್ರೆಸ್ ನಾಯಕಿಗೆ ಬರೆದ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಗಳು ನಡೆದಿವೆ. ನಾನೂ ಸೇರಿದಂತೆ 23 ಮಂದಿ ಕಾಂಗ್ರೆಸ್ ನಾಯಕರು ಸೋನಿಯಾಗೆ ಪತ್ರ ಬರೆದಿದ್ದೆವು. ನಾವು ಯಾರೂ ನಾಯಕತ್ವ ಬದಲಾವಣೆ ಕೋರಿ ಪತ್ರ ಬರೆದಿಲ್ಲ. ಪಕ್ಷ ಸಂಘಟನೆಗಾಗಿ ಕೋರಿಕೊಂಡಿದ್ದೆವು.ಈ ಪತ್ರ ಸದುದ್ದೇಶದಿಂದ ಕೂಡಿತ್ತು ಎಂದು ಮೊಯಿಲಿ ಸ್ಪಷ್ಟಪಡಿಸಿದರು.
ಸೋನಿಯಾಗೆ ಬರೆದ ಪತ್ರ ಹೇಗೆ ಲೀಕ್ ಆಯಿತು ಎಂದು ತಿಳಿಯುತ್ತಿಲ್ಲ, ಕೂಡಲೇ ಇದರ ತನಿಖೆ ಆಗಬೇಕು ಎಂದವರು ಒತ್ತಾಯಿಸಿದ್ದಾರೆ.
Post a comment