"ಅವನನ್ನು ಬಿಟ್ಟು ಬಿಡುತ್ತೇನೆ ಅಮ್ಮಾ"ಎಂದು ಹೇಳಿದವಳು ಸಿಕ್ಕಿದ್ದು ಹೆಣವಾಗಿ.. ಅಪ್ಪ ಮಗನ ಪಾಪಿ ಕೆಲಸ ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾದ ಅನಿಷಾ.
ಅನಿಷಾ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಚೇತನ್ ಶೆಟ್ಟಿ ಮನೆ ಇದೆ. ನಮ್ಮ ಊರಿನವ. ಅಲ್ಲದೆ, ಹತ್ತಿರದಲ್ಲೇ ಮನೆ ಇದ್ದುದ್ದರಿಂದ ಚೇತನ್ ಜತೆ ಅನಿಷಾ ಸ್ನೇಹ ಬೆಳೆಸಿದ್ದಳು. ಹೀಗಿರುವಾಗ ಅದೊಂದು ದಿನ ಚೇತನ್ ಪ್ರೇಮ ನಿವೇದನೆಯನ್ನು ಮಾಡಿದ್ದ. ಒಪ್ಪಿಕೊಂಡ ಅನಿಷಾ ಕೂಡ ಆತನನ್ನು ಗಾಢವಾಗಿ ಪ್ರೀತಿಸ ತೊಡಗಿದಳು. ಈ ವಿಷಯ ಅನಿಷಾ ಮನೆಯಲ್ಲಿ ತಿಳಿದು ಹುಡುಗಿಗೆ ಬುದ್ಧಿವಾದ ಹೇಳಲಾಗಿತ್ತು. ಅವನನ್ನು ಬಿಟ್ಟುಬಿಡ್ತೀನಿ ಅಮ್ಮಾ ಎಂದು ಭರವಸೆ ಸಹ ಕೊಟ್ಟಿದ್ದಳು. ಆದರೆ, ಮೊನ್ನೆ ಗೌರಿ ಹಬ್ಬದ ದಿನ ಚೇತನ್ ಶೆಟ್ಟಿಯ ಮನೆಯ ಪರಿಸರಕ್ಕೆ ತೆರಳಿ ಅಲ್ಲೇ ಸಣ್ಣ ಮರವೊಂದಕ್ಕೆ ನೇಣು ಬಿಗಿದು ಬದುಕನ್ನು ಕೊನೆಗೊಳಿಸಿ ಕೊಂಡಿದ್ದಾಳೆ.
ಗೆಳತಿಯೊಬ್ಬಳ ಗೃಹಪ್ರವೇಶಕ್ಕೆ ಹೋಗಿಬರುತ್ತೇನೆಂದು ಹೊರಟಿದ್ದ ಅನಿಷಾ ಸಂಜೆಯಾದರು ಮನೆಗೆ ಬರಲಿಲ್ಲ. ಇದರ ಚಿಂತೆಯಲ್ಲಿದ್ದ ಮನೆಮಂದಿಗೆ ಅನಿಷಾಳ ಫೇಸ್ಬುಕ್ ಫೋಸ್ಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಚೇತನ್ ಒಬ್ಬ ಹೆಣ್ಣುಬಾಕ ಆತನನ್ನು ಯಾರು ನಂಬದಿರಿ ಎಂದು ಬರೆಯಲಾಗಿತ್ತು. ಅದನ್ನು ನೋಡಿದ ಅನಿಷಾ ಮನೆಯವರಿಗೆ ಆಘಾತವಾಯಿತು. ಕೂಡಲೇ ಮಗಳನ್ನು ಹುಡುಕಲು ಹೊರಟ ಹೆತ್ತವರಿಗೆ ಕಾಡಿನ ನಡುವೆ ಅನಿಷಾ ಶವವಾಗಿ ಪತ್ತೆಯಾಗಿದಳು.
ಸಾಯುವ ಮೊದಲು ಅನಿಷಾ ಡೆತ್ ನೋಟ್ ಬರೆದಿದ್ದು ಅದರಲ್ಲಿ ತಂದೆ-ಮಗನ ಪುರಾಣ ಬಯಲಾಗಿದೆ
ಡೆತ್ ನೋಟ್ ನಲ್ಲಿ ಬರೆದಿರುವಂತೆ ಚೇತನ್ ಶೆಟ್ಟಿ ಅನಿಷಾಳನ್ನು ಪುಸಲಾಯಿಸಿ ಮದುವೆಯಾಗುತ್ತೇನೆ ಎಂದು ಆಕೆಯ ಜತೆ ಊರೆಲ್ಲಾ ತಿರುಗಾಡಿ ಪ್ರೀತಿ-ಪ್ರಣಯ ಅಂತ ಮಜಾ ಮಾಡಿ ಕೊನೆಗೊಮ್ಮೆ ಆಕೆಗೆ ಗುಡ್ ಬಾಯ್ ಅಂತ ಹೇಳಿ ಇನ್ನೊಂದು ಯುವತಿಯ ಜೊತೆ ಮದುವೆ ಫಿಕ್ಸ್ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ.
ಹೆಣ್ಣು ಅಂದ್ರೆ ಅದೊಂದು ಭೋಗದ ವಸ್ತು ಎಂದೇ ಭಾವಿಸಿರುವ ಈ ಪಾಪಿಯ ಅಪ್ಪ ಕೂಡ ಮಗನ ಜತೆ ಸೇರಿಕೊಂಡು ಯುವತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಂದು ಆರೋಪಿಸಲಾಗಿದೆ. ದಯವಿಟ್ಟು ಆತನಿಗೆ ಬೇರೆ ಮದುವೆ ಮಾಡಬೇಡಿ ಐದು ವರ್ಷದಿಂದ ನನ್ನ ಜೊತೆ ಸಂಪರ್ಕದಲ್ಲಿದ್ದಾನೆ. ನನಗೆ ಅವರನ್ನು ಬಿಟ್ಟು ಬದುಕೋದಕ್ಕೆ ಸಾಧ್ಯವೇ ಇಲ್ಲ ಎಂದು ಅನಿಷಾ ಸಾಯುವ ಹಿಂದಿನ ದಿನ ಗೋಗರೆದಿದ್ದಾಳೆ. ಆದರೆ ಆ ಕಟುಕರು ಮಾತ್ರ ಈ ಬಡಪಾಯಿ ಹೆಣ್ಣುಮಗಳ ಮೇಲೆ ದಯೆ ತೋರಿಸಲೇ ಇಲ್ಲ. ಇದರಿಂದ ಮನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೊಬ್ಬ ಯುವತಿ ಈ ರೀತಿಯ ಮೋಸದಾಟಕ್ಕೆ ಬಲಿಯಾಗಬಾರದು ಅದಕ್ಕಾಗಿ ನಾನು ಪ್ರಾಣ ತ್ಯಾಗ ಮಾಡುತಿದ್ದೇನೆ ಎಂದು ಅನಿಷಾ ಬರೆದುಕೊಂಡಿದ್ದಾಳೆ.
ಆರೋಪಿ ಚೇತನ್ ಶೆಟ್ಟಿ ಮತ್ತು ಆತನ ತಂದೆ ಉಮಾನಾಥ ಶೆಟ್ಟಿ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ದೂರು ದಾಖಲಾಗಿದೆ. ಇದೀಗ ಆರೋಪಿಗಳಿಬ್ಬರು ಊರು ಬಿಟ್ಟು ಪರಾರಿಯಾಗಿದ್ದಾರೆ.
Post a comment