ಕುದುರೆಮುಖ ರಾಷ್ಟ್ರೀಯ ಉದ್ಯಾನವನ : ಒಂದು ಕಿಮೀ ಸೂಕ್ಷ್ಮ ಪ್ರದೇಶ ಘೋಷಣೆಗೆ ಕಾಂಗ್ರೆಸ್ ವಿರೋಧ-Times Of Karkala
ಹೆಬ್ರಿ,ಆ.22: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ಒಂದು ಕಿಮೀ ವ್ಯಾಪ್ತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕರಡು ಅಧಿಸೂಚನೆ ಹೊರಡಿಸಿರುವ ಸರಕಾರದ ನಿರ್ಣಯಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಕೃಷ್ಣ ಶೆಟ್ಟಿ, ಸೂಕ್ಷ್ಮ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ 100 ಮೀಟರ್ ಸೀಮಿತಗೊಳಿಸಬೇಕಿದೆ, ಇಲ್ಲವಾದರೆ ಇದರಿಂದ ಅರಣ್ಯದಂಚಿನ ವಾಸಿಗಳಿಗೆ ಸಮಸ್ಯೆಯಾಗುತ್ತದೆ. 1 ಕಿಮೀ ವ್ಯಾಪ್ತಿಯ ಮಿತಿಯಿಂದಾಗಿ ಅಕ್ರಮಸಕ್ರಮದಲ್ಲಿ ಹಕ್ಕುಪತ್ರ ಪಡೆದವರಿಗೆ, ಮನೆ ಕಟ್ಟಿ ಕುಳಿತವರಿಗೆ ತೀವೃವಾದ ಸಮಸ್ಯೆಯಾಗುತ್ತದೆ ಎಂದು ನೀರೆ ಕೃಷ್ಣ ಶೆಟ್ಟಿ ಎಚ್ಚರಿಸಿದ್ದಾರೆ. ಮತ್ತೇ ಅರಣ್ಯ ಇಲಾಖೆಯ ಕಾಯ್ದೆಯಿಂದಾಗಿ ಗ್ರಾಮೀಣ ಪ್ರದೇಶದ ಜನತೆಗೆ ತೊಂದರೆಯಾಗುತ್ತದೆ ಎಂದು ಕೃಷ್ಣ ಶೆಟ್ಟಿ ಹೇಳಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಹೆಬ್ರಿ, ಕಾರ್ಕಳ ತಾಲ್ಲೂಕಿನ ಬಹುತೇಕ ಗ್ರಾಮಗಳ ಮೂಲವಾಸಿಗಳಿಗೆ ಹೆಚ್ಚಿನ ತೊಂದರೆಯಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಮೊದಲಿನಂತೆಯೇ ಅರಣ್ಯ ವ್ಯಾಪ್ತಿಯ ಮಿತಿಯನ್ನು ೧೦೦ ಮೀಟರ್ಗೆ ಸೀಮಿತ ಮಾಡಿ ಗ್ರಾಮೀಣ ಪ್ರದೇಶದ ಜನತೆಗೆ ಮುಂದೆ ಆಗಬಹುದಾದ ಬಹುದೊಡ್ಡ ಸಮಸ್ಯೆಯನ್ನು ತಪ್ಪಿಸುವಂತೆ ಹೆಬ್ರಿ ಗ್ರಾಮ ಅರಣ್ಯ ಹಕ್ಕು ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.
Post a comment