ಬೆಳ್ತಂಗಡಿ:ಮಗನಿಂದಲೇ ತಂದೆಯ ಕೊಲೆ -Times Of Karkala

ಬೆಳ್ತಂಗಡಿ:ಮಗನಿಂದಲೇ ತಂದೆಯ ಕೊಲೆ -Times Of Karkala

ಬೆಳ್ತಂಗಡಿ,ಆ:ಸೋಮವಾರ ಮುಂಜಾನೆ ವಾಕಿಂಗ್‌ ಹೋಗುತ್ತಿದ್ದ ತಂದೆಯ ಮೇಲೆ ಪುತ್ರನೇ  ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಘಟನೆ  ಬೆಳ್ತಂಗಡಿಯಲ್ಲಿ  ವರದಿಯಾಗಿದೆ. ಬೆಚ್ಚಿ ಬೀಳಿಸುವ ಈ ಘಟನೆ ನಡೆದಿರುವುದು   ಬೆಳ್ತಂಗಡಿ ಜೂನಿಯರ್‌ ಕಾಲೇಜು ಮೈದಾನದ ರಸ್ತೆಯಲ್ಲಿ.

ಮಾರಾಕಾಸ್ತ್ರದ  ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ  ವಾಸು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ  ಅವರು  ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.       

ಆರೋಪಿ ಪುತ್ರ ದಯಾನಂದ ಹಾಗು ವಾಸು ನಡುವೆ ಇತ್ತೆನ್ನಲಾದ ವೈಮನಸ್ಸೇ  ಈ ಕೊಲೆಗೆ ಕಾರಣ ಎನ್ನಲಾಗಿದೆ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ವಾಸು ಮೂವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.   


         

ಜಾಹೀರಾತು

     


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget