ಕೊರೋನಾ ಸೋಂಕಿತ ಕಾಂಗ್ರೆಸ್ ಮುಖಂಡ ಆತ್ಮಹತ್ಯೆ-times Of Karkala

ಕೊರೋನಾ ಸೋಂಕಿತ  ಕಾಂಗ್ರೆಸ್ ಮುಖಂಡ ಆತ್ಮಹತ್ಯೆ-times Of Karkala

ಕಡಪ,ಆ,26: ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. 

55 ವರ್ಷದ ಕಾಂಗ್ರೆಸ್ ನಾಯಕ ಕಳೆದ ಕೆಲ ದಿನಗಳಿಂದ ಪ್ರೊದ್ದುತೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಸಂಜೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿಗೆ ತಾನು ಆಸ್ಪತ್ರೆ ಮಾಲೀಕರ ಪರಿಚಯಸ್ಥ ಎಂದು ಸುಳ್ಳು ಹೇಳಿ ದ್ವಿಚಕ್ರ ವಾಹನದಲ್ಲಿ ಆಸ್ಪತ್ರಯಿಂದ ಹೊರಹೋಗಿದ್ದಾರೆ. 

ತಕ್ಷಣ ಕಾರ್ಯೋನ್ಮುಖರಾದ ಆಸ್ಪತ್ರೆಯ ನಿರ್ವಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲು ಸಿಗ್ನಲ್ ಆಧಾರದ ಮೇಲೆ ಪತ್ತೆ ನಡೆಸಿದಾಗ ಸುನ್ನಪುರಲ್ಲಪಲ್ಲೆ ರೈಲ್ವೆ ಹಳಿ ಮೇಲೆ ಮೃತದೇಹ ಮಂಗಳವಾರ ರಾತ್ರಿ ಪತ್ತೆಯಾಗಿದೆ.  ಡೆತ್ ನೋಟ್ ಕೂಡ ದೊರೆತಿದ್ದು, ಅದರಲ್ಲಿ ಸಾವಿಗೆ ಕೊರೋನಾ ಬಂದಿರುವುದೇ ಕಾರಣ ಎಂದು ಬರೆದಿದ್ದಾರೆ.


 

ಜಾಹೀರಾತು



































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget