ಹೆಬ್ರಿ:ಜಾರಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು-Times of karkala

ಹೆಬ್ರಿ:ಜಾರಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು-Times of karkala


ಹೆಬ್ರಿ,ಆ.17:ಕೆಲಸ ಮಾಡುತ್ತಿದ್ದಾಗ ಕಾಲು ಜಾರಿ ಬಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. 

ಹೆಬ್ರಿಯ ಶಿವಪುರ ಗ್ರಾಮದ ಮಂಜುನಾಥ ದೇವಾಡಿಗ ಮೃತ ವ್ಯಕ್ತಿ. ಇವರು  ವಿಪರೀತ ಮದ್ಯಪಾನ ಮಾಡುತ್ತಿದ್ದು ಸುಮಾರು 8 ವರ್ಷಗಳ ಹಿಂದೆ ಮನೆಯವರಲ್ಲಿ ಜಗಳ ಮಾಡಿ ಮನೆಬಿಟ್ಟು ಹೋಗಿದ್ದರು.

ಆಗಸ್ಟ್ 8 ರಂದು  ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಗೋವಿಂದೂರು ನೀರಿನ ಟ್ಯಾಂಕಿನ ಬಳಿ ಕೆಲಸ ಮಾಡುತ್ತಿದ್ದವರು ಸೆಟ್ರಂಗಿಗೆ ರಾಡ್ ಕಟ್ ಮಾಡಲು ಅಲ್ಲೇ ಇದ್ದ  ಕಲ್ಲನ್ನು ಎತ್ತುವಾಗ ಕಾಲು ಜಾರಿ ನೆಲಕ್ಕೆ ಬಿದ್ದು ಸೊಂಟ ಗಂಭೀರ ಗಾಯಗೊಂಡಿತ್ತು.

ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು  ದಾಖಲು ಮಾಡಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ಆಗಸ್ಟ್ 15 ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ  ಪ್ರಕರಣ ದಾಖಲಾಗಿದೆ.

ಜಾಹೀರಾತು



 


  







Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget