ಕಾರ್ಕಳ/ಅಂಡಾರು:ಜಿನಸಿ ವ್ಯಾಪಾರಿ ಶವ ಬಾವಿಯಲ್ಲಿ ಪತ್ತೆ-Times of karkala

ಕಾರ್ಕಳ/ಅಂಡಾರು:ಜಿನಸಿ ವ್ಯಾಪಾರಿ ಶವ ಬಾವಿಯಲ್ಲಿ ಪತ್ತೆ-Times of karkala 

ಕಾರ್ಕಳ:ಅಂಡಾರು ಗ್ರಾಮದ ನಿವಾಸಿ ಜಗದೀಶ್ ಪೈ (48) ರವರ ಶವ ಮನೆಯ ಅಡಿಕೆ ತೋಟದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ.

ಅಂಡಾರಿನಲ್ಲಿ ರಾಮ ಮಂದಿರ ಹತ್ತಿರ ಮನೆ ಹಾಗೂ ಜಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಮನೆಯ ಸ್ವಲ್ಪ ದೂರದಲ್ಲಿ ಅಡಿಕೆ ಹಾಗೂ ತೆಂಗಿನ ಕೃಷಿ ಮಾಡಿಕೊಂಡಿದ್ದು, ಅವರು ಎಂದಿನಂತೆ ದಿನಾಂಕ 07 ರಂದು ಬೆಳಿಗ್ಗೆ 07 ಗಂಟೆಗೆ ಮನೆಯ ತೋಟದ ಅಡಿಕೆ ಹಾಗೂ ತೆಂಗಿನಕಾಯಿ ಹೆಕ್ಕಲು ಹೋಗಿದ್ದರು.

ತುಂಬಾ  ಸಮಯ   ಆದರೂ ವಾಪಾಸ್ಸು ಬಾರದೇ ಇದ್ದಾಗ ರಮೇಶ ಪೈ ಯವರು   ಅಣ್ಣ ಗಣೇಶ ಪೈಯವರೊಂದಿಗೆ ತೋಟಕ್ಕೆ ಹೋಗಿ ಹುಡುಕುತ್ತಿದ್ದಾಗ  ಬಾವಿಗೆ ತಾಗಿದ ದಂಡೆಯ ಹತ್ತಿರ ಕಾಲು ಜಾರಿ ಇರುವುದು ಕಂಡು ಬಾವಿಯನ್ನು ನೋಡಿದಾಗ  ಜಗದೀಶ್ ಪೈರವರು ಬಾವಿಯ ನೀರಿನಲ್ಲಿ ಮುಳುಗಿರುವುದು ಕಂಡು ಬಂದಿದೆ.

ಅಂಡಾರಿನ ಹಾಡಿ ಮನೆಯ ತೋಟದಲ್ಲಿ ಅಡಿಕೆ ಹಾಗೂ ತೆಂಗಿನಕಾಯಿ ಹೆಕ್ಕುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ  ಅಜೆಕಾರು ಪೊಲೀಸ್  ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ .      

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget