ಉಡುಪಿ: ಇಂದ್ರಾಣಿ ನದಿಯಲ್ಲಿ ಶವ ಪತ್ತೆ-Times Of Karkala
ಉಡುಪಿ,ಆ: ಇಂದ್ರಾಣಿ ನದಿಯಲ್ಲಿ 45ರ ಆಸುಪಾಸಿನ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇದು ವಲಸೆ ಕಾರ್ಮಿಕನ ಶವವಾಗಿದ್ದು, ನಿಟ್ಟೂರಿನ ಕೆಲ ಯುವಕರು ಗುರುವಾರ ಸಂಜೆ ಮಠದಬೆಟ್ಟು ಪರಿಸರದಲ್ಲಿ ಗಾಳ ಹಾಕುತ್ತಿದ್ದಾಗ ಶವ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ವಿಷಯ ತಿಳಿಯುತ್ತಿದ್ದಂತೆ ಉಡುಪಿ ಠಾಣಾಧಿಕಾರಿ ಶಕ್ತಿವೇಲು ಸ್ಥಳಕ್ಕೆ ಧಾವಿಸಿದ್ದು, ಸಮಾಜ ಸೇವಕ ನಿತ್ಯಾನಂದ ಒಳಕಾಡು ನೆರವಿನಿಂದ ಶವವನ್ನು ಮೇಲಕ್ಕೆ ಎತ್ತಿದ್ದಾರೆ.
ಮೃತ ಕಾರ್ಮಿಕ ವಿಪರೀತ ಮದ್ಯಪಾನಿಯಾಗಿದ್ದು, ಗುರುವಾರ ಸಂಜೆ ಕಲ್ಸನ್ಕ ಸೇತುವೆಯಿಂದ ಕೆಳಗೆ ಬಿದ್ದು , ನದಿಯಲ್ಲಿ ಕೊಚ್ಚಿ ಹೋಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. .
Post a comment