ಜೋಡುಕಟ್ಟೆಯಲ್ಲಿ ವಿಶ್ವಕರ್ಮ ಮಹಾಸಭಾದ ಸಂಘಟನಾ ಸಭೆ. "ವಿಶ್ವಕರ್ಮರು ಒಂದೇ ವೇದಿಕೆಯಡಿ ಸಂಘಟಿತರಾಗಬೇಕು"-ಮಾರುತಿ ಬಡಿಗೇರ್‌.-Times of karkala

ಜೋಡುಕಟ್ಟೆಯಲ್ಲಿ ವಿಶ್ವಕರ್ಮ ಮಹಾಸಭಾದ ಸಂಘಟನಾ ಸಭೆ.

"ವಿಶ್ವಕರ್ಮರು ಒಂದೇ ವೇದಿಕೆಯಡಿ ಸಂಘಟಿತರಾಗಬೇಕು"-ಮಾರುತಿ ಬಡಿಗೇರ್‌.

ಜೋಡುಕಟ್ಟೆ :ಕಾರ್ಕಳದ ಮಿಯ್ಯಾರು ಜೋಡುಕಟ್ಟೆ ಶ್ರೀ ಕಾಂಚಿ ಕಾಮಾಕ್ಷಿ ವಿಶ್ವಕರ್ಮ ಸಮಾಜಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಮಿಯ್ಯಾರು ಜೋಡುಕಟ್ಟೆ  ಘಟಕದ ಸಂಘಟನಾ ಸಭೆಯನ್ನು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ  ಯುವ ಮುಖಂಡ ಗುರು ವಿಶ್ವಕರ್ಮ ಉದ್ಘಾಟಿಸಿದರು.

ರಾಜ್ಯದಾದ್ಯಂತ ಇರುವ ವಿಶ್ವಕರ್ಮರು ನಮ್ಮ ಅಸ್ವಿತ್ವಕ್ಕಾಗಿ ಮತ್ತು ವಿಶ್ವಕರ್ಮರ ಉಳಿವಿಗಾಗಿ  ಕೆ.ಪಿ.ನಂಜುಂಡಿ ನೇತ್ರತ್ವದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಮೂಲಕ ಒಂದಾಗಬೇಕು ಆಗ ಮಾತ್ರ ನಮಗೆ ದೊಡ್ಡ ಶಕ್ತಿ ಬರುತ್ತದೆ,ಸರ್ಕಾರದ ಅನುದಾನ, ಸವಲತ್ತುಗಳು, ರಾಜಕೀಯ ಸ್ಥಾನಮಾನಗಳನ್ನು ನಾವು ಕೇಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಮಾಧ್ಯಮ ವಕ್ತಾರ ರಾಯಚೂರ್‌ಮಾರುತಿ ಬಡಿಗೇರ್‌ ಹೇಳಿದರು.

ಅವರು ಕಾರ್ಕಳದ ಮಿಯ್ಯಾರು ಜೋಡುಕಟ್ಟೆ ಶ್ರೀ ಕಾಂಚಿ ಕಾಮಾಕ್ಷಿ ವಿಶ್ವಕರ್ಮ ಸಮಾಜಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಮಿಯ್ಯಾರು ಜೋಡುಕಟ್ಟೆ  ಘಟಕದ ಸಂಘಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮರ ಏಕೈಕ ಜನನಾಯಕ ಕೆ.ಪಿ.ನಂಜುಂಡಿಯವರ ಕಳೆದ ಹತ್ತಾರು ವರ್ಷಗಳ ಹೋರಾಟದ ಫಲವಾಗಿ ಇಂದು ದೇಶದಲ್ಲೇ ಮೊದಲ ಭಾರಿಗೆ ಕರ್ನಾಟಕದಲ್ಲಿ ವಿಶೇಷ ಸ್ಥಾನಮಾನಗಳು ಸಿಕ್ಕಿದೆ. ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಸರ್ಕಾರವೇ ನಡೆಸುವ ನಮ್ಮ ವಿಶ್ವಕರ್ಮ ಪರಮಾತ್ಮನ ಶ್ರೀ ವಿಶ್ವಕರ್ಮ ಮಹೋತ್ಸವ. ಇದು ನಮ್ಮ ಸಮುದಾಯಕ್ಕೆ ಕೆ.ಪಿ. ನಂಜುಂಡಿಯವರ ಮೂಲಕ ಸರ್ಕಾರ ನೀಡಿದ ಶಾಶ್ವತವಾದ ದೊಡ್ಡ ಗೌರವ ಮತ್ತು ಅತೀ ದೊಡ್ಡ ಕೊಡುಗೆ ಎಂದು  ಮಾರುತಿ ಬಡಿಗೇರ್‌ ಹೇಳಿದರು.

ಅಮರ ಶಿಲ್ಪಿ ಜಕಣಾಚಾರಿ ಜಯಂತಿ : ಸಮಾಜದ ಏಳಿಗೆಗೆ ಛಲ ಬಿಡಿದ ಮಾರುತಿ ಬಡಿಗೇರ್‌ನಾಡಿನ ಮಹಾನ್‌ಶಿಲ್ಪಿ ಜಕಣಾಚಾರಿ ಅವರ ಜಯಂತಿ ಜನವರಿ ೧ರಂದು ಆಚರಿಸಲು ಅನುಮತಿ ನೀಡಿದ್ದು ಅತೀ ಶೀಘ್ರವಾಗಿ ಸರ್ಕಾರಿ ಆದೇಶ ಹೊರಬೀಳಲಿದೆ. ಇದು ನಂಜುಡಿಯವರು ವಿಶ್ವಕರ್ಮ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ ಎಂದು ಮಾರುತಿ ಬಡೀಗೆರ್‌ಹೇಳಿದರು. ಕೊರೊನಾ ದಿಂದ ವಿಶ್ವಕರ್ಮರು ಸಂಕಷ್ಟದಲ್ಲಿದ್ದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಾಲವನ್ನು ಮನ್ನಾ ಮಾಡುವಂತೆ ಈಗಾಗಲೇ ವಿಧಾನ ಪರಿಷತ್‌ಸದಸ್ಯರಾದ ಕೆ.ಪಿ.ನಂಜುಂಡಿ ಅವರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ ಎಂದು ಮಾರುತಿ ಬಡಿಗೇರ್‌ಹೇಳಿದರು. 

ಯುವ ಘಟಕದ ಉಸ್ತುವಾರಿಯಾಗಿರುವ ಗುರು ವಿಶ್ವಕರ್ಮ ಮಾತನಾಡಿ ವಿಶ್ವಕರ್ಮ ಯುವಕರ ಮೂಲಕ   ಮಹಾಸಭಾವನ್ನು ಬಲಿಷ್ಠವಾಗಿ ಕಟ್ಟಲು ಎಲ್ಲರೂ ಕ್ಯೆಜೋಡಿಸಿ, ನಿಮ್ಮ ನಾವು ಸದಾ ಇದ್ದೇವೆ ಎಂದು ಮನವಿ ಮಾಡಿದರು. 

ವಿಶ್ವಕರ್ಮ ಕಾರ್ಮಿಕ ಸಂಘಟನೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇನ್ನಾ ಯೋಗೀಶ್‌ಆಚಾರ್ಯ ಮಾತನಾಡಿ ನಾವು ಜೋಡುಕಟ್ಟೆ ವಿಶ್ವಕರ್ಮರ ಜೊತೆಗೆ ಸದಾ ಕಾಲ ಇದ್ದೇವೆ. ಎಲ್ಲರಿಗೂ ಕಾರ್ಮಿಕರ ಗುರುತಿನ ಕಾರ್ಡು ಸಹಿತ ಸವಲತ್ತು ದೊರಕಿಸಿಕೊಡಲು ವಿಶೇಷವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು. 

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಟೆಲಿಗ್ರಾಪ್‌ಆಂದೋಲನದ ಹೆಬ್ರಿ ತಾಲ್ಲೂಕು ಸಂಚಾಲಕ ಪತ್ರಕರ್ತ ಸುಕುಮಾರ್‌ಮುನಿಯಾಲ್‌, ರಾಜ್ಯ ಮಾಧ್ಯಮ ವಕ್ತಾರ ಮಾರುತಿ ಬಡಿಗೇರ್‌, ಯುವ ಘಟಕದ ಮುಖಂಡ ಗುರು ವಿಶ್ವಕರ್ಮ ಮತ್ತು ವಿಶ್ವಕರ್ಮ ಕಾರ್ಮಿಕ ಸಂಘಟನೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇನ್ನಾ ಯೋಗೀಶ್‌ಆಚಾರ್ಯ ಅವರನ್ನು ಜೋಡುಕಟ್ಟೆ ಶ್ರೀ ಕಾಂಚಿ ಕಾಮಾಕ್ಷಿ ವಿಶ್ವಕರ್ಮ ಸಮಾಜಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಕಾಂಚಿ ಕಾಮಕ್ಷಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಯ್ಯ ಆಚಾರ್ಯ,ಕಾರ್ಯದರ್ಶಿ ಜಯರಾಜ್‌ ಆಚಾರ್ಯ,  ಜೊತೆ ಕಾರ್ಯದರ್ಶಿ ಶಿಲ್ಪಿ ರಾಜ್‌ ಆಚಾರ್ಯ, ಶಿಲ್ಪಿ ಮಾರಿಮುತ್ತು ಆಚಾರ್ಯ, ಶಿಲ್ಪಿ ರಾಜ್‌ಆಚಾರ್ಯ, ಶಿಲ್ಪಿ ಸುರೇಶ್‌ಆಚಾರ್ಯ,  ಶಿಲ್ಪಿ ಆರ್‌. ಶಿವಶಂಕರ ಆಚಾರ್ಯ, ಅರುಣ್‌ಕುಮಾರ್‌,  ಆಚಾರ್ಯ,  ಮುಂತಾದವರು ಉಪಸ್ಥಿತರಿದ್ದರು. ಬಾಲಾಜಿ ಆಚಾರ್ಯ ನಿರೂಪಿಸಿ ಅಭಿರಾಜ್‌ಆಚಾರ್ಯ ಸ್ವಾಗತಿಸಿದರು.


ಜಾಹೀರಾತು 


  

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget