ಕಾರ್ಕಳ: ಫಲಿತಾಂಶ ಬರುವ ಮುನ್ನವೇ ತಾಯಿಯನ್ನು ಕಳೆದುಕೊಂಡ ತಬ್ಬಲಿ ವಿದ್ಯಾರ್ಥಿನಿ,ಕನ್ನಡ ಮಾಧ್ಯಮ ವಿಭಾಗದಲ್ಲಿ ಶಾಲೆಗೆ ಟಾಪರ್-Times of karkala

ಕಾರ್ಕಳ: ಫಲಿತಾಂಶ ಬರುವ ಮುನ್ನವೇ ತಾಯಿಯನ್ನು ಕಳೆದುಕೊಂಡ ತಬ್ಬಲಿ ವಿದ್ಯಾರ್ಥಿನಿ  ಕನ್ನಡ ಮಾಧ್ಯಮ ವಿಭಾಗದಲ್ಲಿ ಶಾಲೆಗೆ ಟಾಪರ್-Times of  karkala   

ಕಾರ್ಕಳ,ಆ.12:ತೀರಾ ಕಡುಬಡತನ ಹಾಗೂ ತಂದೆತಾಯಿಯನ್ನು ಕಳೆದುಕೊಂಡರೂ ಧೃತಿಗೆಡದೇ ಓದಿ ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಮೂರ್ಸಾಲು ಎಂಬಲ್ಲಿನ ಎಸೆಸ್ಸೆಲ್ಸಿ ವಿದ್ಯಾರ್ಥಿನಿ  ಆಶಾ 560ಅಂಕಗಳಿಸಿ 89: 60% ಪಡೆದು ಕನ್ನಡ ಮಾಧ್ಯಮ ವಿಭಾಗದಲ್ಲಿ ಶಾಲೆಗೆ ಟಾಪರ್ ಆಗಿದ್ದಾಳೆ.

ಕಡ್ತಲ ಗ್ರಾಮದ ಮೂರ್ಸಾಲು ಮಂಜುನಾಥ ನಾಯ್ಕ್ ಹಾಗೂ ಮಮತಾ ನಾಯ್ಕ್ ಅವರ ನಾಲ್ಕು ಮಕ್ಕಳ ಪೈಕಿ ಕಿರಿಯವಳಾದ ಆಶಾ ಮುನಿಯಾಲು ಸರಕಾರಿ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿಯಾಗಿದ್ದು ಯಾವುದೇ ಖಾಸಗಿ ಕೋಚಿಂಗ್ ಪಡೆಯದೇ ಕಷ್ಟಪಟ್ಟು ಓದಿ  ಈ ಸಾಧನೆಯನ್ನು ಮಾಡಿದ್ದಾರೆ.

ತಂದೆಯನ್ನು ಮೊದಲೇ ಕಳೆದುಕೊಂಡಿದ್ದ ಆಶಾ ತನ್ನ ಪರೀಕ್ಷಾ ಫಲಿತಾಂಶ ಬರುವ ಮುನ್ನವೇ ತಾಯಿಯನ್ನೂ ಕಳೆದುಕೊಂಡಿದ್ದಾಳೆ. ಆಕೆಯ ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ತಾಯಿ ಮಮತಾ ನಾಯ್ಕ್ ತಮ್ಮ ಅನಾರೋಗ್ಯದ ನಡುವೆಯೂ ಬೀಡಿಕಟ್ಟಿ ಮಕ್ಕಳನ್ನು ಸಾಕಿಕೊಂಡು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರು. ಆದರೆ ವಿಧಿಯಾಟ ಎಂಬಂತೆ ಮಗಳ ಫಲಿತಾಂಶ ಬರುವ ಮುನ್ನವೇ ತಾಯಿ ಮಮತಾ ನಾಯ್ಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತಂದೆ ತಾಯಿಯನ್ನು ಕಳೆದುಕೊಂಡು ಅಕ್ಷರಶಃ ಅನಾಥರಾಗಿರುವ ಆಶಾಳ ಕುಟುಂಬದಲ್ಲಿ ಹಿರಿಯ ಸಹೋದರಿ ನರ್ಸಿಂಗ್ ಓದುತ್ತಿದ್ದರೆ ಇನ್ನೊಬ್ಬಳು ಲ್ಯಾಬ್ ಟೆಕ್ನಿಶೀಯನ್ ಕೋರ್ಸ್ ಮಾಡುತ್ತಿದ್ದಾಳೆ, ಓರ್ವ ಸಹೋದರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾನೆ.

ಜಾಹೀರಾತು



 



  



Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget