ಕಾರ್ಕಳ:ದೇವಸ್ಥಾನದ ಆಡಳಿತಾಧಿಕಾರಿ ವಿರುದ್ಧ ಜಾತಿ ನಿಂದನೆ ಆರೋಪ-Times of karkala
ಕಾರ್ಕಳ ಪೆರ್ವಾಜೆ ದೇವಸ್ಥಾನದ ಆಡಳಿತಾಧಿಕಾರಿಗಳ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ.
ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳು ಜಾತಿ ತಾರತಮ್ಯ ಹಾಗೂ ದಲಿತ ನಿಂದನೆ ಮಾಡಿದ್ದಾರೆಂದು ಸಮತಾ ಸೈನಿಕ ದಳ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಕಳ ತಾಲೂಕು ಸಮಿತಿ ನಲ್ಲೂರು ಇದರ ಅಧ್ಯಕ್ಷ ಗಜೇಂದ್ರ ನಲ್ಲೂರು ಹಾಗೂ ಕಾರ್ಯದರ್ಶಿ ಗಫೂರ್ ಕಾರ್ಕಳ ಆರೋಪಿಸಿದ್ದಾರೆ.
"ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಹರಿಪ್ರಸಾದ್ ಭಟ್ ಎಂಬುವವರು ಹಲವು ಭಾರಿ ದಲಿತರ ಬಗ್ಗೆ ದೌರ್ಜನ್ಯವೆಸಗಿದ್ದಾರೆ.ದೇವರ ಸನ್ನಿಧಾನಕ್ಕೆ ಮುಕ್ತ ಅವಕಾಶವಿದ್ದರೂ ದಲಿತರ ನಿಂದನೆ ಮಾಡಿದ್ದಾರೆ.ಇದು ಅಸ್ಖಮ್ಯ ಅಪರಾಧ.ಇದರ ಬಗ್ಗೆ ಕಾರ್ಕಳ ನಗರ ಠಾಣೆಗೆ ದೂರು ದಾಖಲಿಸಿದ್ದೇವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Post a comment