ಕಾರ್ಕಳ:ಕಲಾವಿದ ಗಣೇಶ್ ನಾಯಕ್ ರ ಕೈಚಳಕಕ್ಕೆ ಮನಸೋತ ಗಣಪ-Times of karkala

ಕಾರ್ಕಳ:ಗಣೇಶ್ ನಾಯಕ್ ರ ಕೈಚಳಕಕ್ಕೆ ಮನಸೋತ ಗಣಪ-Times of karkala 

    

ಕಾರ್ಕಳ,ಆ.22: ಗಣಪನನ್ನು ವಿಶಿಷ್ಟ ಭಂಗಿಗಳಲ್ಲಿ ನೋಡಿರುತ್ತೀರಿ.ಗೌರಿ ಗಣೇಶ, ಮೋದಕ   ಗಣಪ,ಮೂಷಿಕ ವಾಹನ ಗಣಪ, ಸಿಂಹಾಸನಾರೂಢ ಗಣಪ ಹೀಗೆ ಗಣಪನನ್ನು ಹತ್ತು ಹಲವು ಭಂಗಿಗಳಲ್ಲಿ ಪೂಜಿಸುವುದನ್ನು  ಕಂಡಿದ್ದೇವೆ. ಪ್ರಕೃತಿಗೆ ಹತ್ತಿರವಾಗಿರುವ ಪರಿಸರ ಸ್ನೇಹಿ ಗಣಪನನ್ನು ನಮ್ಮೂರಲ್ಲಿ ಕಂಡಿದ್ದೀರಾ? ಇಂತಹ ಗಣಪನನ್ನು ನೋಡಬೇಕಾದರೆ ಕಾರ್ಕಳದ ಜೋಗಿನಕೆರೆಯ ಅಯ್ಯಪ್ಪ ಮಂದಿರಕ್ಕೆ ನೀವು ಭೇಟಿ ಕೊಡಲೇಬೇಕು. 

ಕಲಾವಿದ ಗಣೇಶ್ ನಾಯಕ್ ತಮ್ಮ ಅದ್ಭುತ ಕೈಚಳಕದಿಂದ ಆಕರ್ಷಕವಾಗಿರುವ ಮಣ್ಣಿನ ಗಣಪತಿ ವಿಗ್ರಹಗಳನ್ನು ಮಾಡಿದ್ದಾರೆ. ಕಳೆದ    ನಾಲ್ಕು ದಶಕಗಳಿಂದ ಗಣೇಶನ ವಿಗ್ರಹ ತಯಾರಿಕೆಯಲ್ಲಿ ತೊಡಗಿರುವ ಈ ಕಲಾವಿದ ಮರ್ಣೆ   ಗ್ರಾಮದ ಎಣ್ಣೆ ಹೊಳೆಯ ನಿವಾಸಿ. ಹೆಸರಿಗೆ ತಕ್ಕಂತೆ  ಗಣೇಶನ ಕಾಯಕದಲ್ಲಿ ತೊಡಗಿರುವ ಗಣೇಶ್ ನಾಯಕ್ ಗೆ ಮೊದಲಿಂದಲೂ ವಿಗ್ರಹ ಕೆಲಸದಲ್ಲಿ ಬಹಳ ಆಸಕ್ತಿ. ಅವರು  ಸಿದ್ಧಗೊಳಿಸಿದ ಗಣಪನಿಗೆ ಕಾರ್ಕಳದಾದ್ಯಂತ ಬೇಡಿಕೆಯಿದೆ. 

ಕಾರ್ಕಳ ಬಸ್ ನಿಲ್ದಾಣ, ಎಣ್ಣೆಹೊಳೆ  ಸಾರ್ವಜನಿಕ ಗಣೇಶೋತ್ಸವ, ನಿಟ್ಟೆ ಕಾಲೇಜು ಕ್ಯಾಮ್ಪಸ್, ಅಜೆಕಾರು, ನೆಲ್ಲಿಕಾರು, ಜೋಡುಕಟ್ಟೆ, ಹೆಬ್ರಿ, ದರೆಗುಡ್ಡೆ, ಧರ್ಮಸ್ಥಳ, ಪೆರಾಡಿ, ಕಾಂತಾವರ, ಸಾಣೂರು ಮೊದಲಾದೆಡೆ ಮನೆಗಳಲ್ಲಿ ಪೂಜೆಗೊಳ್ಳುತ್ತವೆ. ಅವರು ವರ್ಷಕ್ಕೆ ೨೨೦ಕ್ಕೂ ಅಧಿಕ ಗಣೇಶನ ವಿಗ್ರಹಗಳನ್ನು ಮಣ್ಣಿನಿಂದ ತಯಾರಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಲು ಗಣಪತಿಯ  ಅನುಗ್ರಹವೇ ಕಾರಣ ಎನ್ನುತ್ತಾರೆ ವಿನಮ್ರ ಸ್ವಭಾವದ ಗಣೇಶ್. 

ಕಲಾವಿದ ಕುಟುಂಬ

ಗಣೇಶ್ ನಾಯಕ್ ಗೆ ವಿಗ್ರಹ ತಯಾರಿಕೆಯ ಕಲೆ ರಕ್ತಗತವಾಗಿ ಬಂದಿದೆ. ಗಣೇಶ್  ನಾಯಕ್  ಅಜ್ಜ ಮಂಜುನಾಥ್ ನಾಯಕ್ ಇದೆ ಕಾಯಕದಲ್ಲಿ ತೊಡಗಿದ್ದರಂತೆ. ಆದರೆ ಗಣೇಶ್ ನಾಯಕ್ ಗೆ ಅಜ್ಜನನ್ನು ನೋಡಿದ ನೆನಪಿಲ್ಲ. ಅವರು ತಯಾರಿಸಿದ ವಿಗ್ರವನ್ನೂ  ಗಣೇಶ್ ನಾಯಕ್ ಕಂಡವರಲ್ಲ.  ಪೋಸ್ಟ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಗಣೇಶ್ ನಾಯಕ್ ಗೆ ಅದೇಕೋ ಇದ್ದಕ್ಕಿದ್ದಂತೆ ಗಣೇಶನ ಮೂರ್ತಿ ಮಾಡುವ ಮನಸ್ಸಾಯಿತು. ಅದರಂತೆ ಕಾಯಕದಲ್ಲಿ ತೊಡಗಿದ ಅವರನ್ನು  ಯಶಸ್ಸು ಹಿಂಬಾಲಿಸಿತು.

ಮೂರ್ತಿ ತಯಾರಿಕೆಯ ಹಿಂದೆ ಟೀಮ್ ವರ್ಕ್ ಇದೆ. ವಿಗ್ರಹ ತಯಾರಿಕೆಗೆ ಮಂಗಳೂರು ಹೆಂಚಿನ ಕಾರ್ಖಾನೆಯಿಂದ ಆವೆ ಮಣ್ಣು ತರಿಸಿಕೊಳ್ಳುತ್ತಾರೆ. ಪರಿಸರ ನೈರ್ಮಲ್ಯದ ದೃಷ್ಟಿಯಿಂದ ಪೇಯಿಂಟ್ ಗೆ ಬದಲಾಗಿ ವಾಟರ್ ಕಲರ್ ಬಳಸುತ್ತಾರಂತೆ. ಪರಿಸರಕ್ಕೆ  ಹಾನಿಯಾಗದಂತೆ ಬಹಳ ಕಾಳಜಿ ವಹಿಸುತ್ತಾರೆ. 

ಇವರ ಟೀಮ್ ನಲ್ಲಿ ಸುದರ್ಶನ್ ಗುಡಿಗಾರ್, ಗಾಯತ್ರಿ, ವಾಸು ಪೂಜಾರಿ ಸಹ ಕಲಾವಿದರಾಗಿ ಸಹಕರಿಸುತ್ತಾರೆ.

ಫೋಟೋ ಕೃಪೆ:ಶರತ್ ಕಾನಂಗಿ ಜೋಡುರಸ್ತೆ 


 

ಜಾಹೀರಾತು
  Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget