►►ಉಡುಪಿ:ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ-ಜಿಲ್ಲಾ ಯುವಮೋರ್ಚಾದಿಂದ ಕರೆ ►►ರಾಮಜನ್ಮ ಭೂಮಿಯ ಹೋರಾಟದಲ್ಲಿ ಭಾಗಿಯಾದ ಕರ ಸೇವಕರಿಗೆ ಗೌರವ ಸಮರ್ಪಿಸಲು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ-Times of karkala

 ಜಾಹೀರಾತು 

ಜಾಹೀರಾತು 

ಜಾಹೀರಾತು 

 ಜಾಹೀರಾತು 

 ಜಾಹೀರಾತು 
 ಜಾಹೀರಾತು 

  ಜಾಹೀರಾತು 

►►ಉಡುಪಿ:ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ-ಜಿಲ್ಲಾ ಯುವಮೋರ್ಚಾದಿಂದ ಕರೆ


►►ರಾಮಜನ್ಮ ಭೂಮಿಯ ಹೋರಾಟದಲ್ಲಿ ಭಾಗಿಯಾದ  ಕರ ಸೇವಕರಿಗೆ ಗೌರವ ಸಮರ್ಪಿಸಲು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ 


ಸುಮಾರು ಐದು ಶತಮಾನಗಳಿಂದ  ಲಕ್ಷಾಂತರ ಹಿಂದುಗಳ ಹೊರಾಟ , ತ್ಯಾಗ ಹಾಗು ಬಲಿದಾನ ಹಾಗು ರಾಮನ ಆಶೀರ್ವಾದಿಂದ  ಇಂದು ಸನಾತನ ಹಿಂದು ಧರ್ಮ ಹಾಗು  ಹಿಂದುಗಳ ಆರಾದ್ಯನಾದ ಜಗತ್ತಿಗೆ ಆದರ್ಶನಾದ, ಪರಮ ಪುರುಷ , ಪುರುಷೋತ್ತಮ ರಾಮ ನಿಗೆ ಆತನ ಜನ್ಮಸ್ಥಳವಾದ ಆಯೊದ್ಯೆಯಲ್ಲಿಯೆ  ಹೊಸದಾಗಿ ಹಾಗು ಭವ್ಯವಾಗಿ  ರಾಮ ಮಂದಿರವನ್ನ ಕಟ್ಟುವ ಸಂಭ್ರಮದ ತಯಾರಿಯಲ್ಲಿದ್ದೆವೆ.ಈ ಒಂದು ಐತಿಹಾಸಿಕ ಕಾರ್ಯದ  ಮೊದಲ ಚರಣದಂತೆ ರಾಮ ಮಂದಿರಕ್ಕೆ ಅಡಿಗಲ್ಲು ಹಾಕುವ ಐತಿಹಾಸಿಕ  ಕಾರ್ಯಕ್ರಮವು ಇಂದೆ ಬರುವ ಆಗಸ್ಟ್ 5 ನೆ ತಾರೀಕಿನಂದು ಮಾನ್ಯ ಪ್ರಧಾನಮಂತ್ರಿ ಮೋದಿ ಜಿ, ಅಡ್ವಾಣಿ ಜಿ, ಯೊಗಿ ಜಿ, ಉಮಾ ಭಾರತಿ ಜಿ ಮೊದಲಾದ ಸಾದು ಸಂತರ ,ಇತರ ಗಣ್ಯರ  ಉಪಸ್ಥಿತಿಯಲ್ಲಿ ನೆರವೇರಲಿದೆ.

ನಮಗೆ ತಿಳಿದಿರುವಂತೆ ಈ ಒಂದು ರಾಮ ಜನ್ಮ ಭೂಮಿಯ  ಹೊರಾಟ ಎಂದಿಗೂ ಕೇವಲ ಅಯೋದ್ಯೆಗೆ ಸೀಮಿತವಾಗಿರಲಿಲ್ಲ, ಇದು  ಜಗತ್ತಿನ ಮೂಲೆ ಮೂಲೆಯ ಹಿಂದುಗಳ ಹೊರಾಟವಾಗಿತ್ತು,ಪ್ರತಿ ಹಿಂದುವಿನ  ಒಕ್ಕೊರಳ ಕೂಗು   ರಾಮನಿಗೆ ಮಂದಿರವನ್ನ ಆತನ ಜನ್ಮ ಸ್ಥಾನದಲ್ಲೆ  ಕಟ್ಟುವ ಸಂಕಲ್ಪವಾಗಿತ್ತು , ಇಂತಹ ಒಂದು ಹೋರಾಟದಲ್ಲಿ ಕರ್ನಾಟಕದಿಂದಲೂ ಅದರಲ್ಲೂ ರಾಮನ ಮತ್ತೊಂದು ರೂಪವಾದ  ಕೃಷ್ಣನ ಊರಾದ ಉಡುಪಿಯಿಂದಲೂ  ಸಾವಿರಾರು ಜನ ಕರ ಸೇವಕಾರಗಿ  ಭಾಗವಹಿಸಿದ್ದರು, ರಾಮನ ಜನ್ಮಸ್ಥಳವಾದ ಆಯೊದ್ಯೆಯಲ್ಲಿ ವಿವಾದಿತವಾಗಿ ತಲೆ ಎತ್ತಿದ್ದ ಆ ಒಂದು ಅನಿಷ್ಟ ಕಟ್ಟಡವಾಗ ಬಾಬರಿ ಮಸೀದಿಯನ್ನು ದ್ವಂಸ ಮಾಡುವುದರಲ್ಲಿ ಉಡುಪಿಯಿಂದಲೂ ಕರಸೆವಕರಾಗಿ ಸಾವಿರಾರು ಹಿಂದುಗಳು ಭಾಗವಹಿಸಿದ್ದರು ಹಾಗು ನಿರಂತರ  ಹೋರಾಟಗಳನ್ನ ಮಾಡುತ್ತಾ  ರಾಮನಿಗಾಗಿ ಪ್ರಾಣವನ್ನೆ ಅರ್ಪಿಸಿದವರಿದ್ದಾರೆ.

ಈ ಒಂದೊ ದೀರ್ಘಕಾಲದ ಹೊರಾಟದ, ತ್ಯಾಗದ ,ಬಲಿದಾನದ  ಫಲವಾಗಿ ನಾವುಗಳು ಇಂದು ರಾಮ‌ಮಂದಿರ ನಿರ್ಮಾಣ ಕಾರ್ಯದ ಪ್ರತ್ಯಕ್ಷದರ್ಶಿಗಳಾಗಿದ್ದೆವೆ , ಇಂತಹ ಒಂದು ಸಂದರವಾದ ಸಮಯದಲ್ಲಿ,ಉಡುಪಿ ಜಿಲ್ಲೆಯ ಬಿಜೆಪಿ ಯುವಾ ಮೊರ್ಚಾವು ರಾಮನ ಮಂದಿರದ ಶಿಲಾನ್ಯಾಸದ ದಿನವಾದ ಆಗಸ್ಟ್ 5 ರಂದು ಬೆಳಿಗ್ಗೆ ಸಮಯ 10 ಗಂಟೆಗೆ ಸರಿಯಾಗಿ ಉಡುಪಿ ಜಿಲ್ಲೆಯ ಪ್ರತಿ ಗ್ರಾಮದ ದೇವಸ್ಥಾನಗಳಲ್ಲಿ ರಾಮನ ಹೆಸರಲ್ಲಿ "ಅಶ್ವತ್ತದ ಗಿಡ" ಅಥವಾ ರಾಮನ ಆರಾದ್ಯ ದೇವ ಶಿವನ ಇಷ್ಟವಾದ "ಬಿಲ್ವಪತ್ರೆ ಗಿಡ" ವನ್ನ ದೇವಸ್ಥಾನದ ಅವರಣದಲ್ಲಿ ನೆಟ್ಟು ಶಂಖ ಹಾಗು ಘಂಟೆ , ಜಾಗಟೆ ನಾದವನ್ನ ಮೊಳಗಿಸಿ ರಾಮನಿಗೆ ಭಕ್ತಿತರ್ಪಣವ ಅರ್ಪಿಸಿ ,ನಂತರ ಉಡುಪಿಯ ಪ್ರತಿ ಗ್ರಾಮದಲ್ಲಿ  ರಾಮಜನ್ಮ ಭೂಮಿ ಯ ಹೊರಾಟದ "ಕರಸೇವೆ" ಯಲ್ಲಿ  ಭಾಗಿಯಾದ ಕರ ಸೇವಕರನ್ನ ಗುರುತಿಸಿ ಅದೇ ದೇವಸ್ಥಾನದಲ್ಲಿ ಅವರಿಗೆ ಗೌರವವನ್ನ ಸಮರ್ಪಣೆಯನ್ನ  ಸಲ್ಲಿಸುವಂತೆ ಪ್ರತಿ ಗ್ರಾಮದ ಬಿಜೆಪಿ ಯುವ ಮೊರ್ಚಾ ಪ್ರಮುಖರಿಗೆ ಯುವ ಮೊರ್ಚಾ ಕಾರ್ಯಕರ್ತರಿಗೆ ಕೊರಲಾಗುತ್ತದೆ ಎಂದು ಯುವಮೋರ್ಚಾ ಅಧ್ಯಕ್ಷ ವಿಖ್ಯಾತ ಶೆಟ್ಟಿ ತಿಳಿಸಿದ್ದಾರೆ.

ಜಾಹೀರಾತು 
 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget