ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಕಾರ್ಕಳ:ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ:ಬಿಜೆಪಿ ಯುವಮೋರ್ಚಾ ಸದಸ್ಯ ಕಾಂಗ್ರೆಸ್ ಸೇರ್ಪಡೆ-Times of karkala
ನಗರ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕಿಸಾನ್ ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಶೇಖರ ಮಡಿವಾಳರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಬಿಜೆಪಿ ಪಕ್ಷದ ವೈಫಲ್ಯಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ವಿವರಿಸಿದರು.ಅಲ್ಲದೆ ಯುವಕರು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು ಆ ಮೂಲಕ ಪಕ್ಷದ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಕರೆ ನೀಡಿದರು
ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಧುರಾಜ್ ಶೆಟ್ಟಿ ಕಾರ್ಯಕರ್ತರ ಸಲಹೆ ಹಾಗೂ ನಾವು ಹೇಗೆ ಪಕ್ಷವನ್ನು ಬಲಪಡಿಸಬೇಕು ಎಂಬುದನ್ನು ಯುವಕರಿಗೆ ಮಾರ್ಗದರ್ಶನ ನೀಡಿದರು.ಹಾಗೆಯೇ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್ ಹಾಗೂ ದೀಪಕ್ ಕೋಟ್ಯಾನ್ ಯುವಕರಿಗೆ ಕರೆ ನೀಡಿ ನಾವೆಲ್ಲರೂ ಸೇರಿ ಯುವ ಕಾಂಗ್ರೆಸ್ಸನ್ನು ಬಲಿಷ್ಠವಾಗಿ ಕಟ್ಟಲು ಸಹಕಾರ ಅತ್ಯಗತ್ಯ ಎಂದರು.

ಈ ಸಂಧರ್ಭ ಬಿಜೆಪಿ ಯುವ ಮೋರ್ಚಾ ಸದಸ್ಯ ಪವನ್ ರಾವ್ ಕಾಂಗ್ರೆಸ್ ಸೇರಿದರು. ಸಭೆಯಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಳಿನಾಕ್ಷಿ ಆಚಾರ್,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಆರೀಫ್ ಕಲ್ಲೋಟ್ಟೆ,ಹಿಂದುಳಿದ ವರ್ಗದ ಅಧ್ಯಕ್ಷ ನವೀನ್ ದೇವಾಡಿಗ,ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪ್ರಭಾಕರ ಬಂಗೇರ, ಸೇವಾದಳದ ಅಧ್ಯಕ್ಷರಾದ ಸುಶಾಂತ್ ಸುಧಾಕರ್, ಪುರಸಭಾ ಸದಸ್ಯರಾದ ಹರೀಶ್ ಕುಮಾರ್, ಪ್ರಭಾ ರೆಹಮತ್ ಪ್ರತಿಮಾ ಪ್ರವೀಣ್ ಶೆಟ್ಟಿ, ಸೀತಾರಾಮ್ ದೇವಾಡಿಗ, ಮಾಜಿ ಪುರಸಭಾ ಸದಸ್ಯರಾದ ಪ್ರಿಯಾ ಜೈನ್, ಸುಭಿತ್ ಎನ್ ಆರ್, ರಾಜೇಶ್ ದೇವಾಡಿಗ, ವಿವೇಕಾನಂದ ಶೆಣೈ, ಪ್ರಮುಖರಾದ ವೆಲೇರಿಯನ್ ಪಾಯ್ಸ್, ರಾಜೇಂದ್ರ ದೇವಾಡಿಗ, ಮುಕ್ತಾರ್ ಅಹಮದ್, ನಗರ ಯುವ ಕಾಂಗ್ರೆಸ್ಸಿನ ಕಾರ್ಯಕರ್ತರು ಹಾಗೂ ಬ್ಲಾಕ್ ಕಾಂಗ್ರೆಸ್ ಐ.ಟಿ ಸೆಲ್ ಅಧ್ಯಕ್ಷರಾದ ಸತೀಶ್ ಕಾರ್ಕಳ ಉಪಸ್ಥಿತರಿದ್ದರು ಅಶ್ರಫ್ ಜರಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು
ಜಾಹೀರಾತು
ಜಾಹೀರಾತು

Post a comment