September 2020

ಬೆಂಗಳೂರು,ಸೆ,19: ಕೇಂದ್ರ ಸರಕಾರದ ಸೂಚನೆಯಂತೆ    ಸೆಪ್ಟೆಂಬರ್   21 ರಿಂದ  ಶಾಲೆಗಳನ್ನು ತೆರೆದರೂ ತರಗತಿಗಳು ಪಾಠ ಪ್ರವಚನಗಳು ಆರಂಭವಾಗವುದಿಲ್ಲ  ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಾಲೆಗಳಲ್ಲಿ ತರಗತಿಗಳನ್ನು ತೆರೆಯಲು ಕೇಂದ್ರದಿಂದ ಇನ್ನೂ ಅನುಮತಿ ಬಂದಿಲ್ಲ. ಕೊರೋನಾ ಹಾವಳಿ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರಲ್ಲೂ ಆತಂಕ ಇದೆ ಎಂದು ಅವರು ಹೇಳಿದ್ದಾರೆ. 

1ರಿಂದ 10ನೆ ತರಗತಿ ತನಕ ದಾಖಲಾತಿ ಸೆ 30 ರ ಒಳಗೆ ಮುಗಿಯುತ್ತದೆ. ಖಾಸಗಿ ಶಾಲೆಗಳು ಒಂದು ಅವಧಿಯ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಅವರು ಹೇಳಿದ್ದಾರೆ. 

 

 

ಜಾಹೀರಾತು


ಬೆಳ್ತಂಗಡಿ, ಸೆ,19 :  ಸ್ಕೂಟರ್‌‌ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಅರುಣ್‌‌ ಶೆಟ್ಟಿ (30), ಬೆಳ್ತಂಗಡಿ ಕನ್ಯಾಡಿ ಗ್ರಾಮದ ಗುರಿಪಳ್ಳ ಹೇಮಂತ್‌ ಬಿರ್ವ ಯಾನೆ ಹರ್ಷಿತ್‌ (20), ಉಜಿರೆ ಗ್ರಾಮದ ಸಂಪತ್‌‌‌ ಯಾನೆ ಶ್ಯಾಮ್‌‌‌ (24) ಎಂದು ಗುರುತಿಸಲಾಗಿದೆ.   

ಸಾಂದರ್ಭಿಕ ಚಿತ್ರ
ಮೇ 5ರಂದು ಉಜಿರೆಯ ವಂದನಾ ಭಂಡರ್ಕಾರ್‌ (40) ಎಂಬವರ ಸ್ಕೂಟರ್‌‌ ಕಾಣೆಯಾಗಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು.
ಇದಾದ ನಂತರ ಉಜಿರೆ ಗ್ರಾಮದ ಪಂಚರಿಕಾಡು ರಬ್ಬರ್‌ ತೋಟದಲ್ಲಿ ಮೂರು ಮಂದಿ ಸ್ಕೂಟರ್‌‌ನ ಬಿಡಿಭಾಗಗಳನ್ನು ಕಳಚುತ್ತಿರುವ ವಿಚಾರದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು.
ವಿಚಾರಣೆ ನಡೆಸಿದ್ದ ಸಂದರ್ಭ ಸತ್ಯ ಒಪ್ಪಿಕೊಂಡ ಆರೋಪಿಗಳು, ಉಜಿರೆಯ ಗ್ಯಾರೇಜ್‌‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಸೇರಿದಂತೆ ಎರಡು ಸ್ಕೂಟರ್‌‌‌ಗಳನ್ನು ಕಳ್ಳತನ ಮಾಡಿ ಅದರ ಬಿಡಿಭಾಗಗಳನ್ನು ಕಳಚಿ ಮಾರಾಟ ಮಾಡಲು ಯತ್ನಿಸಿರುವುದಾಗಿ             ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್‌‌‌ ಪಿ.ಜಿ.ಹಾಗೂ ಬೆಳ್ತಂಗಡಿ ಪಿಎಸ್‌‌ಐ ನಂದಕುಮಾರ್‌ ನೇತೃತ್ವದಲ್ಲಿ ಎಎಸ್‌ಐ ದೇವಪ್ಪ, ಎಎಸ್‌ಐ ತಿಲಕ್‌‌‌, ಪಿಸಿಗಳಾದ ಪುಟ್ಟಸ್ವಾಮಪ್ಪ, ಚರಣ್‌ರಾಜ್‌‌‌‌, ವೆಂಕಟೇಶ್‌‌‌‌, ಅಶೋಕ್‌‌‌‌ ಪಾಲ್ಗೊಂಡಿದ್ದರು.

 

 

ಜಾಹೀರಾತು

ಹೆಬ್ರಿ,ಸೆ 18: ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ, ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಇಲಾಖೆ ಇದರ ಸಹಯೋಗದಲ್ಲಿ ಸೆಪ್ಟೆಂಬರ್ 17 ರಂದು ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಹೆಬ್ರಿ ರಾಮ್ ಮಂದಿರದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಶಾಸಕ ವಿ ಸುನಿಲ್ ಕುಮಾರ್ ಉದ್ಘಾಟಿಸಿದರು. ಕಾರ್ಕಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸುಮಾರು 450 ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ ಕೃಷ್ಣಾ ಪ್ರಸಾದ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣೆ ಶೆಟ್ಟಿ, ಗೀತಾಂಜಲಿ ಸುವರ್ಣ, ಉದ್ಯಮಿ ಸತೀಶ್ ಪೈ, ಗುರುದಾಸ್ ಶೆಣೈ, ದಿನೇಶ್ ಪೈ, ಬಿಜೆಪಿ ಮುಖಂಡರಾದ ಎಂ ಕೆ ವಿಜಯ್ ಕುಮಾರ್, ಮಣಿರಾಜ್ ಶೆಟ್ಟಿ, ಹೆಬ್ರಿ ತಾಲೂಕು ಪಂಚಾಯತ್ ಅಧ್ಯಕ್ಷ ರಮೇಶ್ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ರವೀಂದ್ರ ಮಡಿವಾಳ, ರೇಷ್ಮಾ ಶೆಟ್ಟಿ, ಜಯರಾಮ್ ಸಾಲ್ಯಾನ್, ನವೀನ್ ನಾಯಕ್, ಸತೀಶ್ ಶೆಟ್ಟಿ ಮುಟ್ಲುಪಾಡಿ ಉಪಸ್ಥಿತರಿದ್ದರು. ಮಾಲಿನಿ ಜೆ ಸ್ವಾಗತಿಸಿ, ಪ್ರಮೀಳಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಿನಯ್ ಬಂಗೇರ ವಂದಿಸಿದರು. 

 

 

ಜಾಹೀರಾತು

ಕಾರ್ಕಳ,ಸೆ,18 : ಯುವವಾಹಿನಿ ಕಾರ್ಕಳ ಘಟಕ , ರೋಟರಿ ಆ್ಯನ್ಸ್ ಕ್ಲಬ್ ಮತ್ತು ರೋಟರಾಕ್ಟ್   ಕ್ಲಬ್ ಇವರ ವತಿಯಿಂದ ಪರಪ್ಪಾಡಿ ನಲ್ಲೂರಿನ 2 ಬಡ ಕುಟುಂಬಗಳಾದ  ಮಮತಾ ದಿನೇಶ್‌ ಹಾಗೂ ವನಿತಾ ಆನಂದರವರ ಮನೆಗೆ  ಶುಕ್ರವಾರ ಸೋಲಾರ್ ಲೈಟ್ ಅನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ತಾರಾನಾಥ ಕೋಟ್ಯಾನ್, ರೋಟರಿ ಆ್ಯನ್ಸ್ ಸಂಸ್ಥೆಯ ಅಧ್ಯಕ್ಷರಾದ ರಮಿತಾ ಶೈಲೇಂದ್ರ ರಾವ್, ಪರಪ್ಪಾಡಿ ನಲ್ಲೂರು ಶಾಲೆಯ ಮುಖ್ಯಶಿಕ್ಷಕರಾದ ಪೂರ್ಣಿಮಾ ಶೆಣೈ, ರೋರ‍್ಯಾಕ್ಟ್ ಸದಸ್ಯರಾದ ಸಮೀರ್ ಹಾಗೂ ಕಾರ್ಕಳ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷರಾದ ಸುಧಾಕರ್ ಪೂಜಾರಿ, ಉಪಾಧ್ಯಕ್ಷರಾದ ಮಮತಾ ಅಂಚನ್, ನಿರ್ದೇಶಕರಾದ ಅಶೋಕ್ ಸುವರ್ಣ, ಪ್ರಕಾಶ್ ಕೋಟ್ಯಾನ್, ಸಂದೇಶ್ ಕೋಟ್ಯಾನ್, ಸುರೇಂದ್ರ ಪತ್ತೊಂಜಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

 

 

ಜಾಹೀರಾತು


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget