ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಲೋಕಾರ್ಪಣೆ:100 ಮಂದಿಯಿಂದ ನೇತ್ರದಾನ.
ಗ್ರಾಮದ ಅಭಿವೃದ್ಧಿಯಿಂದ ಜಗತ್ತು ವಿಕಾಸ : ಡಾ.ಕಲ್ಲಡ್ಕ ಪ್ರಭಾಕರ ಭಟ್.
ಕುಡಿಬ್ಯೆಲು : ಗ್ರಾಮದ ಅಭಿವೃದ್ಧಿಯಾದರೆ ದೇಶ ಸ್ವಾವಲಂಭಿಯಾಗಿ ವಿಕಾಸಗೊಳ್ಳುತ್ತದೆ, ಗ್ರಾಮಾಭಿವೃದ್ಧಿಯ ಮಹತ್ವದ ಕೆಲಸಗಳು ಕುಡಿಬೈಲು ಎಂಬ ಹಳ್ಳಿಯ ಮೂಲಕ ಯಶಸ್ವಿಯಾಗಿ ನಡೆಯುತ್ತಿರುವುದು ನಿಜಕ್ಕೂ ಅದ್ಬುತ. ಇಂತಹ ಗ್ರಾಮ, ಯುವಕರ ತಂಡ ಮತ್ತು ಸಮಾಜಮುಖಿ ಸೇವೆಯನ್ನು ನನ್ನ ೫೦ ವರ್ಷ ದ ಸೇವಾವಧಿಯಲ್ಲಿ ಎಲ್ಲೂ ಕಂಡಿಲ್ಲ, ಕುಡಿಬೈಲು ಶಾಂತಿ ನಿಕೇತನದ ಸಾಧನೆ ಜಗತ್ತಿಗೆ ಮಾದರಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯ ಕಾರಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ದೇವರ ಹೆಸರಿನಲ್ಲಿ ಸಂಘಗಳನ್ನು ಕಟ್ಟಿ ೧೮ ಶೇಕಡ ದಿಂದ ಬಡ್ಡಿಯನ್ನು ಜನರನ್ನು ಬಡ್ಡಿಯ ಮೂಲಕ ಲೂಟಿ ಮಾಡುತ್ತಿರುವ ಸಮಾಜದ ನಡುವೆಯೂ ಹಳ್ಳಿಯಲ್ಲಿ ಜನರ ಸೇವೆ ಸಹಕಾರದ ಧ್ಯೇಯದ ಉದ್ದೇಶದಿಂದ ಆರಂಭಗೊಂಡ ಸಹಕಾರ ಸಂಘ ಬಡಜನರ ಸೇವೆ ಮಾಡಲಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಅಭಿನಂದಿಸಿದರು.
ತಲೆಹಿಡುಕ ಪತ್ರಕರ್ತನೊಬ್ಬ :
ಸಭೆಯಲ್ಲಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡುತ್ತ. ತಲೆ ಹಿಡುಕ ಪತ್ರಕರ್ತನೊಬ್ಬ....ವೃದ್ದರೊಬ್ಬರಿಗೆ ಹೀಗೆ ಕೇಳುತ್ತಾನೆ. ನೀವು ದೇವರನ್ನು ನೋಡಿದ್ದೀರಾ. ಎಂದು....
ನಮ್ಮ ಹಿರಿಯರು ದೇವರನ್ನು ಕಂಡು ನಂಬಿ ದೇವರು ಇದ್ದಾರೆ ಎಂದು ಪೂಜಿಸಿದ್ದಾರೆ. ಹಿರಿಯರ ನಂಬಿಕೆಯಂತೆ ನಾವೂ ನಂಬುತ್ತೇವೆ. ದೇವರು ಇದ್ದಾರೆ ಎಂದರು. ಇಂತಹ ನಂಬಿಕೆಯ ವಿಚಾರವೊಂದು ಕಳೆದ ಕೆಲವು ದಿನಗಳಲ್ಲಿ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.
ಸ್ವಾಮೀಜಿ ಹೀಗೆ ಹೇಳುವಾಗ ಪತ್ರಕರ್ತ ಅನೇಕರು ಸಭೆಯಲ್ಲಿ ಇದ್ದರು.
ಅದಮಾರು ಮಠಾದೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜಕ್ಕೆ ಸಹಾಯ ಮಾಡಲು ಆರಂಭಿಸಿದ ಶಾಂತಿ ನಿಕೇತನ ಸಹಕಾರ ಸಂಘವು ಜನರ ಸೇವೆಗಾಗಿ ಮುಡಿಪಾಗಿಡಲಿ ಎಂದು ಆಶಿಸಿ ತನಗೆ ನೀಡಿದ ಪಾದಕಾಣಿಕೆಯನ್ನು ಯುವವೃಂದದ ಸೇವೆಗೆ ಮರಳಿ ನೀಡಿದರು.
ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಕುಡಿಬೈಲು ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವವೃಂದ ಮತ್ತು ಸಹಕಾರಿ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು.
ಜ್ಞಾನಸ್ಪೂರ್ತಿ ಯೋಜನೆಯ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಯುವ ವೃಂದದ ೧೦೦ ಮಂದಿ ಸದಸ್ಯರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ನೇತ್ರದಾನ ಮಾಡಲು ನೊಂದಾಯಿಸಿಕೊಂಡರು.ಕಿದಿಯೂರು ಉದಯ ಕುಮಾರ್ ಪ್ಯಾಮೀಲಿ ಟ್ರಸ್ಟ್ ಪ್ರವರ್ತತಕ ಉದಯ ಕುಮಾರ್ ಶೆಟ್ಟಿ, ಸಂಸ್ಕಾರ ಭಾರತಿಯ ಯುವ ವಿಭಾಗದ ಪ್ರಾಂತ ಕಾರ್ಯದರ್ಶಿ ಆದರ್ಶ ಗೋಖಲೆ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಸಂತೆಕಟ್ಟೆ ನರಸಿಂಹ ನಾಯ್ಕ್, ಹೆಬ್ರಿ ಬಂಟರ ಸಹಕಾರಿ ಸಂಘದ ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಉಡುಪಿ ಜಿಲ್ಲಾ ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ವಿಲ್ಫ್ರೆಡ್ ಡಿಸೋಜಾ, ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಮಣಿಪಾಲ ಕೆಎಂಸಿ ಕಸ್ತೂರ್ಬಾ ಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಮನಾಲಿ ಹಝಾರಿಕಾ,ನಾಗಮಂಡಲ ಕನ್ನಿಕಾ ನರ್ತಕ ಬಾಲಕಷ್ಣ ವೈಧ್ಯ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಗಣಪತಿ ಎಚ್,ಎ. ಉದ್ಯಮಿ ಎಚ್.ಪ್ರವೀಣ್ ಬಲ್ಲಾಳ್, ಸಮಾಜ ಸೇವಕ ಕುಚ್ಚೂರು ಶ್ರೀಕಾಂತ್ ಪೂಜಾರಿ, ಹಂದಿಕಲ್ಲು ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ಮಿಥುನ್ ಶೆಟ್ಟಿ, ಸಂಘದ ಉಪಾಧ್ಯಕ್ಷ ರವೀಶ್ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ಎಸ್, ವ್ಯವಸ್ಥಾಪಕಿ ರಾಜಶ್ರೀ, ನಿರ್ದೇಶಕರಾದ ಜಯಕರ್, ಗಣೇಶ್ ಶೆಟ್ಟಿ, ಮಹೇಶ್, ಕೆ.ಗಣೇಶ್, ಸಂದೇಶ್ ಕುಲಾಲ್, ಪ್ರಾಂಕ್ಲೀನ್ ದಾಂತಿ, ರೇಷ್ಮಾ, ವಿನೋದಾ, ಶ್ರೀಕಾಂತ್ ಸುವರ್ಣ, ವಿಜಯ ಹೆಬ್ಬಾರ್, ದೀಕ್ಷಿತ್ ನಾಯಕ್ ಉಪಸ್ಥಿತರಿದ್ದರು.
ಕುಚ್ಚೂರು ಪ್ರೌಢಶಾಲಾ ಧ್ಯೆಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ನಿರೂಪಿಸಿದರು.
Post a comment