ಹೆಬ್ರಿ:ಕೋಳಿ ಅಂಕಕ್ಕೆ ದಾಳಿ,11 ಜನರು ವಶಕ್ಕೆ-Times of karkala

ಹೆಬ್ರಿ:ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿ 11 ಜನರನ್ನು ವಶಕ್ಕೆ ಪಡೆದುಕೊಂಡ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಪೊಲೀಸ್ ವರದಿ:

ಹೆಬ್ರಿ: ದಿನಾಂಕ 29/09/2020 ರಂದು ವರಂಗ ಗ್ರಾಮದ ತಲೆ ಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಸುಮ.ಬಿ-ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ಮಾಹಿತಿ ದೊರೆತ ಮೇರೆಗೆ ಸಿಬ್ಬಂದಿಗಳೊಂದಿಗೆ ಹಾಗೂ ಪಂಚರೊಂದಿಗೆ  ಇಲಾಖಾ ವಾಹನ ಹಾಗೂ ಖಾಸಗಿ ವಾಹನದಲ್ಲಿ ರಾತ್ರಿ 7-45 ಗಂಟೆಗೆ ವರಂಗ ಗ್ರಾಮದ ತಲಮನೆ ಎಂಬಲ್ಲಿಗೆ ಹೋಗಿ ಮರೆಯಲ್ಲಿ ನಿಂತು ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಸುಮಾರು 20 ರಿಂದ 30 ಜನರು ಲ್ಯಾಂಪ್ ಗಳ ಬೆಳಕಿನ ಸಹಾಯದಿಂದ ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಅವುಗಳಿಗೆ ಹಿಂಸೆಯಾಗುವಂತೆ ಕಾಳಗಕ್ಕೆ ಬಿಟ್ಟು ವಿಜೇತ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ರಾತ್ರಿ 8-00 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 11 ಜನರನ್ನು ವಶಕ್ಕೆ ಪಡೆದು ಕೊಂಡಿದ್ದು. ಉಳಿದವರು ಓಡಿ ಹೋಗಿದ್ದು ಈ ಕೋಳಿ ಅಂಕವನ್ನು ತಲೆಮನೆಯ ಉದಯ ಮತ್ತು ಸುದರ್ಶನ್ @ ಬಾಬು ಎಂಬವರು ನಡೆಸುತ್ತಿರುವುದಾಗಿ ಅವರುಗಳು ನುಡಿದಿದ್ದು. ಅರೋಪಿತರುಗಳನ್ನು ದಸ್ತಗಿರಿ ಮಾಡಿ ಅವರುಗಳು ಕೋಳಿ ಅಂಕಕ್ಕೆ  ಬಳಸಿದ 19 ಕೋಳಿ ಹುಂಜಗಳನ್ನು ಹಾಗೂ ಅರೋಪಿತರುಗಳ ಬಳಿ ಇದ್ದ ಕೋಳಿ ಅಂಕಕ್ಕೆ ಬಳಸಿದ ನಗದು 17,040/ರೂ ಹಾಗೂ ಕೋಳಿಗಳಿಗೆ ಕಟ್ಟಿದ 10 ಬಾಳುಗಳು ಹಾಗೂ ಸ್ಥಳದಲ್ಲಿದ್ದ ಒಟ್ಟು 25 ವಾಹನಗಳನ್ನು ಮತ್ತು ಎರಡು ಲ್ಯಾಂಪ್ ಇವುಗಳನ್ನು ಮೇಲಿನ ಎಲ್ಲಾ ಸೊತ್ತುಗಳನ್ನು ಪಂಚರ ಸಮಕ್ಷಮ ಮಹಜರು ಬರೆದು ಸ್ವಾದೀನ ಪಡಿಸಿಕೊಂಡು ಆರೋಪಿತ 1.ಉದಯ  2, ಸುದರ್ಶನ್ @ ಬಾಬು 3  ಸುಧೀರ್ 4 ಭಾಸ್ಕರ, 5 ಸುನೀಲ್, 6 ಸಂತೋಷ್ ,7 ಚರಣ್ ಕುಮಾರ್ 8 ಶ್ರೀಧರ ಶೆಟ್ಟಿ 9 ರಘುನಾಥ ಪೂಜಾರಿ 10 ರಮೇಶ್ ಶೆಟ್ಟಿ 11 ಮಂಜುನಾಥ 12 ಪ್ರಜ್ವಲ್ 13 ಸುಧೀರ್ ಪೂಜಾರಿಗಳ ವಿರುದ್ದ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2020 ಕಲಂ: 87,93 ಕೆ ಪಿ ಆಕ್ಟ್‌  ನಂತೆ  ಪ್ರಕರಣ ದಾಖಲಾಗಿರುತ್ತದೆ.    

 

 

 

ಜಾಹೀರಾತು
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget