ಅಂಡಾರು:2 ಲಕ್ಷಕ್ಕೂ ಮಿಕ್ಕಿದ ಹೆಬ್ಬಲಸು ಮರಗಳ ದಿಮ್ಮಿ ವಶ, 7 ಜನರ ಬಂಧನ-Times Of Karkala

ಅಂಡಾರು:2 ಲಕ್ಷಕ್ಕೂ ಮಿಕ್ಕಿದ ಹೆಬ್ಬಲಸು ಮರಗಳ ದಿಮ್ಮಿ ವಶ, 7 ಜನರ ಬಂಧನ-Times Of Karkala
ಕಾರ್ಕಳ,ಸೆ,10: ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಅಂಡಾರು ಗ್ರಾಮದ ಕೊಂಡಾಡಿ ಎಂಬಲ್ಲಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಅದನ್ನು ಸೈಜುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಕಾರ್ಕಳ ವನ್ಯಜೀವಿ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿ,ಈ ಪ್ರಕರಣದಲ್ಲಿ ಶಾಮೀಲಾದ 7 ಜನ ಆರೋಪಿಗಳನ್ನು ಮಂಗಳವಾರ ಬಂಧಿಸಿ ಬಂಧಿತರಿಂದಲೂ ರೂ 2 ಲಕ್ಷಕ್ಕೂ ಮಿಕ್ಕಿದ ಸುಮಾರು 50 ಹೆಬ್ಬಲಸು ಮರದ ದಿಮ್ಮಿಗಳನ್ನು ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ ಪಿಕಪ್ ವಾಹನ, ಕಟಿಂಗ್ ಮೆಷಿನ್ ವಶಪಡಿಸಿಕೊಂಡಿದ್ದಾರೆ. 


ಈ ಪ್ರಕರಣದಲ್ಲಿ ಆರೋಪಿಗಳಾದ ಅಂಡಾರು ಗ್ರಾಮದ ರಮೇಶ್ ಗೌಡ, ಕಾಡತಾಳ ಗ್ರಾಮದ ಪುಲ್ಲಡ್ಕ ಸತೀಶ್ ಹೆಗ್ಡೆ, ಅಂಡಾರು ಗ್ರಾಮದ ಸದಾಶಿವ ಶೆಟ್ಟಿಗಾರ್,ಅಂಡಾರು ಗ್ರಾಮದ ಸತೀಶ್ ಗೌಡ, ಪ್ರಶಾಂತ್ ಎಂ ಕೆ, ಎಲ್ಲರೆ ಗ್ರಾಮದ ಪಲಜೆಡ್ಡು  ಹರೀಶ್ ನಾಯ್ಕ್ ಹಾಗು ಮಾರ್ನೆ ಗ್ರಾಮದ ಭಾಸ್ಕರ್ ಆಚಾರ್ಯ ಸೇರಿ 7 ಜನ ಬಂಧಿತ ಆರೋಪಿಗಳು. 


ಕಳೆದ ಸೆಪ್ಟೆಂಬರ್ 6 ರಂದು ಭಾರಿ ಮಾರಕಳ್ಳತನ ದಂಧೆಯ ಖಚಿತ ಸುಳಿವು ಪಡೆದ ವನಿಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕುಮಾರಿ ಸ್ಮಿತಾ ಎಂ ಡಿ, ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಕೆ, ನಾಗರಾಜ ನೇತೃತ್ವದ ಸಿಬ್ಬಂದಿ ತಂಡ ರಹಸ್ಯ ಕಾರ್ಯಾಚರಣೆ ನಡೆಸಿ ಹಲವು ಸಮಯದಿಂದ  ಈ ದಂಧೆಯನ್ನು ಮಾಡಿಕೊಂಡಿರುವ ಆರೋಪಿಗಳನ್ನು  ಕದ್ದ ಮಾಲು ಸಹಿತ  ಬಂಧಿಸಿದ್ದಾರೆ. 


ಮರಗಳ್ಳತನ  ಅತ್ಯಂತ ರಹಸ್ಯವಾಗಿ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಕೊಂಡಾಡಿ ಪರಿಸರದ ಆರೋಪಿಗಳೇ ಕಿಂಗ್ ಪಿನ್ ಗಳು. ತಮ್ಮ ಜಮೀನಿಗೆ ಹೊಂದಿಕೊಂಡಿರುವ ಅಭಯಾರಣ್ಯದಲ್ಲಿ ಮರಗಳನ್ನು ಕಡಿದು ಬಳಿಕ ಅವುಗಳನ್ನು ಸೈಜುಗಳನ್ನಾಗಿ ಮಾಡಿ ಮಾರುವ ಜಾಲ ನಿರಾತಂಕವಾಗಿ ನಡೆಯುತ್ತಿತ್ತು. ಮೂಲಗಳ ಪ್ರಕಾರ 15 ದಿನಗಳ ಹಿಂದೆಯೇ ಮರಗಳನ್ನು ಕಡಿದು ಬಳಿಕ ಅವುಗಳನ್ನು ಸೈಜುಗಳನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. 

 

ಜಾಹೀರಾತುPost a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget