ಪ್ರೌಢ,ಪದವಿಪೂರ್ವ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಅನುಮತಿ-Times Of Karkala

ನವದೆಹಲಿ,ಸೆ,9:ಸೆಪ್ಟೆಂಬರ್ 21 ರಿಂದ 9ನೆ ತರಗತಿಯಿಂದ 12ನೆ ತರಗತಿಯವರಿಗೆ ಭಾಗಶಃ ಶಾಲೆ ಆರಂಭಿಸುವ ಕುರಿತು
ಕೇಂದ್ರ ಸರಕಾರ ಮಂಗಳವಾರ ನಿಯಮಾವಳಿಗಳನ್ನು  ಹೊರಡಿಸಿದೆ. 
ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ನಿಯಮಾವಳಿಗಳಲ್ಲಿ ,"ಇದು ನಿಯಮಿತ ತರಗತಿ ಅಲ್ಲ. ಆನ್ಲೈನ್ ತರಗತಿಯಲ್ಲಿನ ಗೊಂದಲಗಳನ್ನು ಬಗೆಹರಿಸಲು ಶಿಕ್ಷಕರ ಭೇಟಿಗಾಗಿ 9ರಿಂದ 12ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರ ಲಿಖಿತ ಒಪ್ಪಿಗೆ ಅವಶ್ಯ. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ  ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಯೇ ಶಾಲಾ ಕಾಲೇಜು ನಿಧಾನವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕು" ಎಂದು ಸೂಚಿಸಲಾಗಿದೆ.
ವಿದ್ಯಾರ್ಥಿಗಳು ನೋಟ್‌ ಪುಸ್ತಕ, ಪೆನ್‌–ಪೆನ್ಸಿಲ್‌, ನೀರಿನ ಬಾಟಲಿ ಮೊದಲಾದವುಗಳನ್ನು ಪರಸ್ಪರ ಹಂಚಿಕೊಳ್ಳುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಗುಂಪುಗೂಡುವಿಕೆ, ಪ್ರಾರ್ಥನೆ ಮತ್ತು ಕ್ರೀಡಾ ಚಟುವಟಿಗಳನ್ನೂ ನಿಷೇಧಿಸಲಾಗಿದೆ.
ಶಾಲೆಗೆ ಬರುವ ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಮಾರ್ಗಸೂಚಿ ಪ್ರಕಾರ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳ ನಡುವೆ ಆರು ಅಡಿ ಅಂತರವನ್ನು ಕಾಪಾಡಿಕೊಳ್ಳಬೇಕು. ಉಸಿರಾಟದ ಶಿಷ್ಟಾಚಾರಗಳನ್ನು ಅನುಸರಿಸುವುದು, ಆರೋಗ್ಯ  ಸೇತು ಆ್ಯಪ್ ಡೌನ್ ಲೋಡ್ ಮಾಡುವುದು ಮತ್ತು ಉಗುಳುವುದು ನಿಷೇಧಿಸುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.
ಆದಾಗ್ಯೂ, ಆನ್‌ಲೈನ್ ಮತ್ತು ದೂರಶಿಕ್ಷಣ ಮುಂದುವರಿಯುತ್ತದೆ ಮತ್ತು ಅದನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯಾರ್ಥಿ ಮತ್ತು ಶಿಕ್ಷರ ನಡುವಿನ ಸಂವಾದ ವ್ಯವಸ್ಥಿತ ಕ್ರಮದಲ್ಲಿರಬೇಕು ಎಂದೂ ಸಚಿವಾಲಯ ಸೂಚಿಸಿದೆ.

 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget