ಪ್ರಯೋಗಶೀಲತೆಗೆ ಹೆಸರಾದ ಶಿಕ್ಷಕ ವಿನಾಯಕ ಅವರಿಗೆ ಪ್ರಶಸ್ತಿ-Times Of Karkala
ಕಾರ್ಕಳ,ಸೆ 4 :ಕಳೆದೊಂದು ದಶಕದಿಂದ ರೆಂಜಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಯೋಗಾತ್ಮಕ ಬೋಧನೆಗೆ ಹೆಸರಾದ ಶಿಕ್ಷಕ ವಿನಾಯಕ ನಾಯ್ಕ್ ಈ ಬಾರಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶನಿವಾರದಂದು ಉಡುಪಿಯ ಸಂತ ಸಿಸಿಲಿ ಶಾಲೆಯಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಮಾಜ ವಿಜ್ಞಾನದ ಬೋಧನೆಗೆ ಡಿಜಿಟಲ್ ಟಚ್ ನೀಡಿರುವ ಶಿಕ್ಷಕ ವಿನಾಯಕ್ ನಾಯ್ಕ್ ಬಹಳಷ್ಟು ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಉತ್ತಮ ವಾಕ್ಚತುರ್ಯ ಹೊಂದಿರುವ ಅವರು ಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಹರ್ಷ ವ್ಯಕ್ತಪಡಿಸಿದ ಅವರು, 'ಪ್ರಶಸ್ತಿ ಬಂದಿರುವುದರಿಂದ ನನ್ನ ಕೆಲಸ ಕಾರ್ಯಗಳಿಗೆ ಪುಷ್ಟಿ ದೊರೆತಂತಾಗಿದೆ. ಶಿಕ್ಷಣ ಇಲಾಖೆ ನನ್ನನ್ನು ಗುರುತಿಸಿದೆ. ಇದಕ್ಕೆ ಹೆಮ್ಮೆ ಪಡುತ್ತೇನೆ' ಎಂದಿದ್ದಾರೆ.
'ಶಿಕ್ಷಕರಾದವರು ಸದಾ ಹೊಸತನಕ್ಕೆ ತೆರೆದುಕೊಂಡಿರಬೇಕು. ಶಿಕ್ಷಕರು ತಟಸ್ಥವಾಗಿರಬಾರದು. ಪಾದರಸದಂತೆ ಕ್ರಿಯಾಶೀಲವಾಗಿರಬೇಕು. ಹೇಳಿದ್ದನ್ನೇ ಹೇಳಿದರೆ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟದು. ಬೋಧನಾ ವಿಧಾನದಲ್ಲಿ ನೂತನ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿರಬೇಕು" ಎಂದು ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.
ರೆಂಜಾಳ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ವಿನಾಯಕ್ ತರಬೇತಿಯಲ್ಲಿ ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ್ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Post a comment