ಜೇಸಿಐ ಬೆಳ್ಮಣ್ಣು : ಜೇಸಿ ಸಪ್ತಾಹ, ಸಪ್ತವರ್ಣ ಸಮಾರಂಭ ಉದ್ವಾಟನೆ-Times Of Karkala

ಕಾರ್ಕಳ,ಸೆ,8 : ಬೆಳ್ಮಣ್ಣು ಜೇಸಿಐನ 40ನೇ ವರ್ಷಾಚರಣೆಯ  ಅಂಗವಾಗಿ ಸೆಪ್ಟೆಂಬರ್ 07ರಿಂದ 13ರವರೆಗೆ  ಜರಗಲಿರುವ ಏಳು ದಿನಗಳ ಜೇಸಿ ಸಪ್ತಾಹ ಸಮಾರಂಭ - ಸಪ್ತವರ್ಣ ಸಮಾರಂಭವು ಸೋಮವಾರ ಪಡುಬೆಳ್ಮಣ್ಣು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ವಿದ್ಯುಕ್ತವಾಗಿ ಉದ್ವಾಟನೆಗೊಂಡಿತು. 

ಉದ್ವಾಟನಾ ಸಮಾರಂಭದ ಅಂಗವಾಗಿ ಗ್ರ್ಯಾಂಡ್ ಚೆಸ್ ಚಾಂಪಿಯನ್ ಬೆಳ್ಮಣ್ಣು ಮತ್ತು ಕಿಂಗ್ ಆಫ್ ಕ್ಯಾರಂ ಪಂದ್ಯಾಟ ಜರಗಿತು.
ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಲಯಾಧ್ಯಕ್ಷರಾದ ವೈ. ಸುಕುಮಾರ್ ರವರು ಜೇಸಿ ಸಪ್ತಾಹ ಉದ್ವಾಟಿಸಿ ಸಮಾರಂಭಕ್ಕೆ ಶುಭ ಹಾರೈಸಿದರು.ಸಮಾರಂಭದಲ್ಲಿ ಭಾರತೀಯ ಜೇಸಿಐನ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಅನಿಲ್ ಕುಮಾರ್, ಬೆಳ್ಮಣ್ಣು ರೋಟರಿ ಕ್ಲಬ್ ಅಧ್ಯಕ್ಷ ಸುಭಾಸ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ವೇಳೆ  ಜೇಸಿಐನ ಪೂರ್ವಾಧ್ಯಕ್ಷರಾದ ಸತೀಶ್ ಕೋಟ್ಯಾನ್, ದಿನೇಶ್ ಸುವರ್ಣ, ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ರವಿರಾಜ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷೆ ಶ್ವೇತಾ ಸುಭಾಷ್, ಕಾರ್ಯದರ್ಶಿ ಅಶ್ವಥ್ ಶೆಟ್ಟಿ, ಜೇಸಿರೇಟ್ ಅಧ್ಯಕ್ಷೆ ಸೌಜನ್ಯ ಸತೀಶ್ ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷ ಸಂದೀಪ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget