ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕಿ ಪೂರ್ಣಿಮಾ ಆಯ್ಕೆ:ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಇವರ ಸಾಧನೆಗಳೇನು ಗೊತ್ತಾ?-(ಟೈಮ್ಸ್ ಆಫ್ ಕಾರ್ಕಳ ವಿಶೇಷ ವರದಿ)

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕಿ ಪೂರ್ಣಿಮಾ ಆಯ್ಕೆ:ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಇವರ ಸಾಧನೆಗಳೇನು ಗೊತ್ತಾ?-(ಟೈಮ್ಸ್ ಆಫ್ ಕಾರ್ಕಳ ವಿಶೇಷ ವರದಿ) 

ಕಾರ್ಕಳ,ಸೆ0.4:ಸರಿಸುಮಾರು ಮೂರೂ ದಶಗಳ ಕಾಲ ಕಾರ್ಕಳ ತಾಲೂಕಿನ ವಿವಿದೆಡೆಗಳಲ್ಲಿ  ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ತನ್ನ ಪ್ರತಿಭೆ ಹಾಗು ಸಾಮರ್ಥ್ಯದ ಮೂಲಕ ರಾಜ್ಯ ಮಟ್ಟದಲ್ಲೂ  ಗುರುತಿಸಲ್ಪಟ್ಟಿರುವ  ಪರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ  ಈ ಬಾರಿಯ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶನಿವಾರದಂದು ಉಡುಪಿಯ  ಸಂತ  ಸಿಸಿಲಿ ಶಾಲೆಯಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅವರು  ಪ್ರಶಸ್ತಿ ಸ್ವೀಕರಿಸಲಿದ್ದಾರೆ.  

ಪ್ರಶಸ್ತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಶಿಕ್ಷಕಿ ಪೂರ್ಣಿಮಾ, 'ನನ್ನ ವಿದ್ಯಾರ್ಥಿಗಳೇ ನನಗೆ ದೊಡ್ಡ ಪ್ರಶಸ್ತಿ' ಎಂದರು. ಮುಖ್ಯಶಿಕ್ಷಕರಾಗಿ ಜನಪ್ರಿಯರಾಗಿದ್ದ ದಿವಂಗತ ನಾಗೇಶ್ ಶೆಣೈ ಅವರ ಸುಪುತ್ರಿಯಾಗಿರುವ ಪೂರ್ಣಿಮಾ ಶೆಣೈ, ತಾನು ಶಿಕ್ಷಕ ವೃತ್ತಿಗಿಳಿಯಲು ತನ್ನ ತಂದೆಯೇ ಪ್ರೇರಣೆ ಎಂದು ಹೇಳಿದರು.

ಸದಾ ಕ್ರಿಯಾಶೀಲರಾಗಿರುವ ಪೂರ್ಣಿಮಾ ಪ್ರತಿಭಾಶಾಲಿ. ಇವರ ಪ್ರತಿಭೆಯನ್ನು ಗುರುತಿಸಿ ರಾಜ್ಯ ಸರಕಾರ 2010-11ರಲ್ಲಿ ಇಂಟೆಲ್ ಅವಾರ್ಡ್ ನೀಡಿ ಗೌರವಿಸಿತ್ತು. ಕರ್ನಾಟಕ ಸರಕಾರದ ಜ್ಞಾನ ವಿಜ್ಞಾನ ಸಮಿತಿ ಕೊಡಮಾಡುವ ಐ ಪಿ ಎಸ್ ಅನಿತಾ ಕೌಲ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ರಾಜ್ಯದ ಮೂವರು ಪ್ರತಿಭಾನ್ವಿತರಲ್ಲಿ ಶಿಕ್ಷಕಿ ಪೂರ್ಣಿಮಾ ಒಬ್ಬರು. 

ಪರಪ್ಪಾಡಿ ಶಾಲೆಯಲ್ಲಿ ವಾಟರ್ ಬೆಲ್ ಸೇರಿದಂತೆ ಮಕ್ಕಳ ಆರೋಗ್ಯದ ಹಿತದಿಂದ  ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇತ್ತೀಚಿಗೆ ಪರಪ್ಪಾಡಿ ಶಾಲೆಗೆ ಸ್ವಚ್ಛತಾ ಅವಾರ್ಡ್ ಕೂಡ ಬಂದಿದೆ. ಶಾಲೆಯ ಆವರಣ ಪ್ಲಾಸ್ಟಿಕ್ ಮುಕ್ತವಾಗಿದೆ. ಇಲ್ಲಿನ ಇಂಗ್ಲಿಷ್ ಸ್ಪೀಕಿಂಗ್ ಕಲಿಕೆ ಜನಪ್ರಿಯತೆಯನ್ನು ಪಡೆದಿದೆ. ಕೊರೋನಾ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ವಿದ್ಯಾರ್ಥಿಗಳ ಮನೆಮನೆಗೆ ಹೋಗಿ ಪಾಠ ಮಾಡುವ ಯೋಜನೆಯನ್ನೂ ಹಮ್ಮಿಕೊಂಡಿದ್ದಾರೆ. 

 

ಜಾಹೀರಾತು


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget