ಮೂಡಬಿದಿರೆ,ಸೆ,12: ಬೆಳುವಾಯಿಯ ಟೆಂಪೋ-ಬೈಕ್ ನಡುವೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಶಿರ್ತಾಡಿಯ ಬಿಜೆಪಿ ನಾಯಕ ಪವನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಬಿಜೆಪಿ ಶಿರ್ತಾಡಿ ಮಹಾಶಕ್ತಿ ಕೇಂದ್ರದ ಬೆಳುವಾಯಿ ಕುಕ್ಕೆಡಲು ಗ್ರಾಮದ ಒಂದನೇ ವಾರ್ಡಿನ ಅಧ್ಯಕ್ಷ ಪವನ್ ಮೃತಪಟ್ಟವರು. ಕಳೆದ ಶನಿವಾರ ರಾತ್ರಿ ಬೆಳುವಾಯಿಯಿಂದ ರಾಷ್ಟೀಯ ಹೆದ್ದಾರಿ ಮೂಲಕ ಬೈಕ್ ನಲ್ಲಿ ಕಾಂತಾವರಕ್ಕೆ ಹೋಗುತ್ತಿದ್ದಾಗ ಮಿನಿ ಟೆಂಪೋ ಗೆ ಬೈಕ್ ಢಿಕ್ಕಿಯಾಗಿತ್ತು. ಅಪರಾಧದಲ್ಲಿ ಗಂಭೀರ ಗಾಯಗೊಂಡಿದ್ದ ಪವನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Post a comment