ಕಾರ್ಕಳ:ಎಪಿಎಂಸಿ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ,ಮಾಜಿ ಭೂನ್ಯಾಯ ಮಂಡಳಿ ಸದಸ್ಯ ಆನಂದ್ ಬಂಡಿಮಠ(66) ಸೆ.23 ರಂದು ನಿಧನ ಹೊಂದಿದರು.
ಮೃತರು ಪತ್ನಿ ಪುತ್ರ ಹಾಗೂ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಬಿಜೆಪಿಯಲ್ಲಿ ಜಿಲ್ಲಾ ತಾಲೂಕು ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಿದ್ದ ಇವರು ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನಕ್ಕೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮತ್ತಾರು ರತ್ನಕಾರ್ ಹೆಗ್ಡೆ ಸಂತಾಪ ಸೂಚಿಸಿದ್ದಾರೆ.
Post a comment