ಕಾರ್ಕಳ:ಗಾಂಜಾವನ್ನು ಸಿಗರೇಟಿನಲ್ಲಿ ಸೇರಿಸಿ ಸೇವಿಸುತ್ತಿದ್ದ ಇಮ್ರಾನ್ ಖಾನ್ (32) ಎಂಬುವವನನ್ನು ಕಾರ್ಕಳ ನಗರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಜೇಶ್ ಬಂಧಿಸಿದ್ದಾರೆ.
ಪೊಲೀಸ್ ವರದಿ
ಕಾರ್ಕಳ: ದಿನಾಂಕ 24/09/2020 ರಂದು ಬೆಳಿಗ್ಗೆ ರಾಜೇಶ್, ಸಹಾಯಕ ಪೊಲೀಸ್ ಉಪನಿರೀಕ್ಷಕರು ಕಾರ್ಕಳ ನಗರ ಪೊಲೀಸ್ ಠಾಣೆ ಇವರು ಕಾರ್ಕಳ ತಾಲೂಕು ಕಾರ್ಕಳ ಕಸಬ ಗ್ರಾಮದ ಕಜೆ ರಸ್ತೆಯಲ್ಲಿರುವ ಮಟನ್ ಸ್ಟಾಲ್ ಸಮೀಪ ತಲುಪಿದಾಗ ಸಾರ್ವಜನಿಕ ರಸ್ತೆ ಬದಿ ಆಪಾದಿತ ಇಮ್ರಾನ್ ಖಾನ್ (32), ತಂದೆ: ಅಬ್ದುಲ್ ರೆಹಮಾನ್, ವಾಸ: ಇಮ್ರಾನ್ ಮಂಜಿಲ್, ಬಂಗ್ಲೆಗುಡ್ಡೆ, ಕಸಬ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬಾತ ಮಾದಕ ವಸ್ತುವಾದ ಗಾಂಜಾವನ್ನು ಸಿಗರೇಟ್ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವುದು ಧೃಢಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2020 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
Post a comment