ಕಾರ್ಕಳ:ಉದ್ಯಮಿ ಸುನಿಲ್ ಶೆಟ್ಟಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ:ಪೂನಾದಲ್ಲಿ ಹೋಟೆಲ್​ ವ್ಯಾಪಾರದಲ್ಲಿ ನಷ್ಟವೇ ಕಾರಣ?-Times of karkala

ಕಾರ್ಕಳ:ಉದ್ಯಮಿ  ಸುನಿಲ್ ಶೆಟ್ಟಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ:ಪೂನಾದಲ್ಲಿ ಹೋಟೆಲ್​ ವ್ಯಾಪಾರದಲ್ಲಿ ನಷ್ಟವೇ ಕಾರಣ?

ಕಾರ್ಕಳ:ಗುಂಡು ಹಾರಿಸಿಕೊಂಡು ಹೋಟೆಲ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ತಾಲೂಕಿನ ಹಿರ್ಗಾನದ ಕೃಷ್ಣ ಬೆಟ್ಟುನಲ್ಲಿ ನಡೆದಿದೆ. 45 ವರ್ಷದ ಹೋಟೆಲ್​ ಉದ್ಯಮಿ ಸುನಿಲ್ ಶೆಟ್ಟಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವವರು.

ಪೂನಾದಲ್ಲಿ ಹೋಟೆಲ್​ ನಡೆಸುತ್ತಿದ್ದ ಸುನಿಲ್ ಶೆಟ್ಟಿ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಖಿನ್ನತೆಗೆ ಒಳಗಾಗಿದ್ದರು  ಎಂದು ತಿಳಿದುಬಂದಿದೆ. ಹೀಗಾಗಿ, ಆರ್ಥಿಕ ಮುಗ್ಗಟ್ಟಿನಿಂದ ಸುನಿಲ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೇ  ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ನಾಡ ಕೋವಿಯಿಂದ ತಲೆಗೆ ಗುಂಡು ಸಿಡಿಸಿಕೊಂಡು ಸಾವನ್ನಪ್ಪಿದ್ದಾನೆ. ಕಾರ್ಕಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

 

ಜಾಹೀರಾತು


Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget