ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಶಿಧರ್ ಜಿ,ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಾಂಡುರಂಗ ನಾಯಕ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬೇಲಾಡಿ ವಿಠ್ಠಲ್ ಶೆಟ್ಟಿ ಮುಂತಾದ ಗಣ್ಯರ ಸಮ್ಮುಖದಲ್ಲಿ 15 ಮಂದಿ ಶಿಕ್ಷಕರುಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಬೆಲಾಡಿ ವಿಠ್ಠಲ್ ಶೆಟ್ಟಿ, ಲಕ್ಷ್ಮಿ ಕಾಂತ್ ನಿಟ್ಟೆ, ಜಾರ್ಜ್ ಕ್ಯಾಸ್ಟಲಿನೊ ನಕ್ರೆ, ರಾಜೇಂದ್ರ ಭಟ್, ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ,ನಿವೃತ್ತ ಪ್ರಾಂಶುಪಾಲರಾದ ಪಾಂಡುರಂಗ ನಾಯಕ್ , ನಾಗರಾಜ್, ಶ್ರೀಧರ್ ಆಚಾರ್ಯ, ಶ್ರೀಮತಿ ಇಂದಿರಾ ಆರ್ ಭಟ್, ಶ್ರೀಮತಿ ವೀರ ಪಾಯಸ್,ಶ್ರೀಮತಿ ಮೋಹಿನಿ ನಾಯಕ್, ವಿಜೇತ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಮುಂತಾದವರನ್ನು ಗುರುತಿಸಿ ಗೌರವಿಸಿದರು.
ಸಂತೃಪ್ತ ಗ್ರಾಹಕರ ಸೇವೆಯೇ ಪರಮಧ್ಯೇಯ ಎಂದು ನಂಬಿರುವ,ಸದಾ ಒಂದಲ್ಲೊಂದು ಸಮಾಜಮುಖಿ ಕಾರ್ಯಗಳ ಮೂಲಕ ಜನಮ ಗೆದ್ದಿರುವ ಪೂರ್ಣಿಮಾ ಸಿಲ್ಕ್ಸ್ ಇದೀಗ ವಿನೂತನ ರೀತಿಯಲ್ಲಿ ಶಿಕ್ಷಕರನ್ನು ಗುರುತಿಸಿ ಅಭಿನಂದಿಸಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
Post a comment