ಮಂಗಳೂರು,ಸೆ,17: ಎರಡು ತಿಂಗಳು ಮಳೆಗಾಲದ ರಜಾ ಅವಧಿ, ಒಂದು ತಿಂಗಳು ಕೊರೋನಾದ ಲಾಕ್ ಡೌನ್ ...ಹೀಗೆ ಸುಮಾರು ಆರು ತಿಂಗಳು ಮೀನುಗಾರಿಕೆಯಿಲ್ಲದೆ ದೂರ ಉಳಿದಿದ್ದ ಕರಾವಳಿಯ ಮೀನುಗಾರಿಕೆ ಇನ್ನೇನು ಚೇತರಿಸಿಕೊಳ್ಳಲಿದೆ ಎನ್ನುವಷ್ಟರಲ್ಲಿ ಚೀನಾಕ್ಕೆ ರಫ್ತಾಗಬೇಕಿದ್ದ ಮೀನಿಗೆ ಮತ್ತೆ ನಿರ್ಬಂಧ ಹೇರಿದ್ದು ಮತ್ಸೋದ್ಯಮಕ್ಕೆ ಹೊಡೆತ ಕೊಟ್ಟಿದೆ.
ಕರ್ನಾಟಕದಿಂದ ಪ್ರತಿವರ್ಷ ಸುಮಾರು ಒಂದು ಸಾವಿರ ಕಂಟೇನರ್ ಮೂಲಕ ಚೀನಾಕ್ಕೆ ಮೀನು ರಫ್ತಾಗುತ್ತಿತ್ತು. ಬೇರೆ ಬೇರೆ ಪ್ರಬೇಧದ ಸುಮಾರು 25 ಟನ್ ಇಲ್ಲಿಂದ ರವಾನೆಯಾಗುತ್ತಿತ್ತು. ಆದರೆ ಎರಡೂ ದೇಶದ ನಡುವಿನ ಕದನದಿಂದಾಗಿ ಅಂತರಾಷ್ತ್ರೀಯ ವಹಿವಾಟಿನ ಮೇಲೆ ಹೊಡೆತ ಬಿದ್ದಂತಾಗಿದೆ. ಚೀನಾ ಮಾತ್ರವಲ್ಲದೆ ಬೇರೆ ದೇಶಗಳಿಗೆ ರಫ್ತಾಗುತ್ತಿದ್ದ ಮಿನಿನ್ ಮೇಲು ನಿರ್ಬಂಧ ಹೇರಲಾಗಿದೆ. ಹೀಗಾಗಿ ವಿದೇಶಕ್ಕೆ ಮೀನು ರಫ್ತಾಗುತ್ತಿಲ್ಲ. ಕಳೆದ ವರ್ಷ 1600ಕೋಟಿ ರೂ ಮೌಲ್ಯದ ಮೀನು ರಫ್ತಾಗಿತ್ತು. ಈ ನಡುವೆ ಕಾರ್ಮಿಕರಿಲ್ಲದ ಸಮಸ್ಯೆ ಇತರ ಸಮಸ್ಯೆಗಳಿಂದಲೂ ಮೀನುಗಾರರು ಹೈರಾಣಾಗಿದ್ದಾರೆ. ಮಂಗಳೂರಿನಲ್ಲಿ ಮೀನು ರಫ್ತು ಮಾಡುವ 12 ಹಾಗೂ ಉಡುಪಿಯಲ್ಲಿ 10 ಘಟಕಗಳಿವೆ.
Post a comment