ಕಾರ್ಕಳ,ಸೆ,8: ಬೆಳ್ಮಣ್ಣು ಜೇಸಿಐ 40ನೇ ವರ್ಷದ ಸಂಭ್ರಮದ ಪ್ರಯುಕ್ತ ಆಯೋಜಿಸಿರುವ ಜೇಸಿ ಸಪ್ತಾಹ, ಸಪ್ತವರ್ಣ ಸಮಾರಂಭದ ಎರಡನೇ ದಿನ ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು.
ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಸತ್ಯನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯಾಧಿಕಾರಿ ಅನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ರಾವ್ ಬೆಳ್ಮಣ್ಣು, ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷರಾದ ಗಣಪತಿ ಆಚಾರ್ಯ, ಮುರಳೀಧರ ಜೋಗಿ, ದಿನೇಶ್ ಸುವರ್ಣ, ಸುಭಾಸ್ ಕುಮಾರ್, ಪ್ರದೀಪ್ ಆಚಾರ್ಯ ಜೇಸಿರೇಟ್ ವಿಭಾಗದ ಅಧ್ಯಕ್ಷೆ ಸೌಜನ್ಯ ಸತೀಶ್ ಕೋಟ್ಯಾನ್, ಕಾರ್ಯಕ್ರಮದ ನಿರ್ದೇಶಕ ಡೆನ್ಜಿಲ್ ಉಪಸ್ಥಿತರಿದ್ದರು.
Post a comment