ಹೆಬ್ರಿ,ಸೆ,15: ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ವತಿಯಿಂದ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಮಾರು 45 ಸಾವಿರ ವೆಚ್ಚದಲ್ಲಿ ನೀಲಾವರ ಗೋಶಾಲೆ ಹಿಂಡಿ, ಹಸಿಹುಲ್ಲು ಸಹಿತ ಗೋವಿಗಾಗಿ ಮೇವನ್ನು ಭಾನುವಾರ ಸಮಪಿ೯ಸಲಾಯಿತು.

ಲಯನ್ಸ್ ಕ್ಲಬ್ ಮೂಲಕ ಸ್ಥಾಪಿಸಿದ ಗೋಗ್ರಾಸ ನಿಧಿ ಮತ್ತು ಸವ೯ರ ಸಹಕಾರದಲ್ಲಿ ನಿರಂತರ ಗೋವಿನ ಸೇವೆಯನ್ನು ಮಾಡುತ್ತೇವೆ.ಈಗಾಗಲೇ ಗ್ರೋಗ್ರಾಸ ನಿಧಿ ಸ್ಥಾಪಿಸಿದ್ದೇವೆ, ಗೋವಿಗಾಗಿ ನೀರು ಯೋಜನೆಯಡಿ ಹೆಬ್ರಿಯ ವಿವಿದೆಡೆ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಗೋವಿಗಾಗಿ ಮೇವು ಕಾಯ೯ಕ್ರಮದಲ್ಲಿ ನೀಲಾವರ ಗೋಶಾಲೆಗೆ 34 ಸಾವಿರ ವೆಚ್ಚದ ಹಿಂಡಿ, ಹಸಿಹುಲ್ಲು ಸೇರಿ 45 ಸಾವಿರ ವೆಚ್ಚದಲ್ಲಿ ಮೇವು ಸಮಪಿ೯ಸಿದ್ದೇವೆ ಎಂದು ಹೆಬ್ರಿ ಸಿಟಿಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಭಾಗ೯ವಿ ಆರ್. ಐತಾಳ್ ಹೇಳಿದರು.
ಇದೆ ವೇಳೆ ಹೆಬ್ರಿಯ ಗೋಶಾಲೆಗೆ ಲಯನ್ಸ್ ಕ್ಲಬ್ ಮೂಲಕ 1 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಡಾ.ಭಾಗ೯ವಿ ಐತಾಳ್ ತಿಳಿಸಿದರು. ಗೋಸೇವೆಗೆ ಮಂದಾತಿ೯ ಸೂರ್ಯ ನಾರಾಯಣ ಅಡಿಗ ಅವರು ನೀಡಿದ ದೊಡ್ಡ ಮೊತ್ತದ ದೇಣಿಗೆಗೆ ಡಾ.ಭಾಗ೯ವಿ ಐತಾಳ್ ಕೃತಜ್ಞತೆ ಸಲ್ಲಿಸಿದರು. ಅಮೃತಭಾರತಿ ಮಾತೃ ಮಂಡಳಿ ಮತ್ತು ಜೇಸಿಐ ಗೋವಿಗಾಗಿ ಮೇವಿಗೆ ಸಹಕಾರ ನೀಡಿದರು.
ಹೆಬ್ರಿ ಲಯನ್ಸ್ ಕ್ಲಬ್ಬಿನ ಗೋಸೇವೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀಥ೯ ಸ್ವಾಮೀಜಿ ಕೃತಜ್ಞತೆ ಸಲ್ಲಿಸಿದರು. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ದಿನಕರ ಪ್ರಭು, ಕಾಯ೯ದಶಿ೯ ಕೆ.ರಾಮಚಂದ್ರ ಭಟ್, ಕೋಶಾಧಿಕಾರಿ ರಘುರಾಮ ಶೆಟ್ಟಿ, ಪೂವಾ೯ಧ್ಯಕ್ಷ ಎಚ್.ರಮೇಶ್ ಆಚಾಯ೯, ಡಾ. ರಾಮಚಂದ್ರ ಐತಾಳ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Post a comment