ಕಾರ್ಕಳ:ದುರ್ಗಾ ಕಾಡಿನಲ್ಲಿ ಮಾನವನ ಮೂಳೆ ಪತ್ತೆ-Times Of Karkala

ಕಾರ್ಕಳ,ಸೆ 8: ದುರ್ಗಾ ಗ್ರಾಮದ ಮಲೆಬೆಟ್ಟು ಜಂಬ ಹೆಸರಿನ ದಟ್ಟ ಕಾಡಿನಲ್ಲಿ ಮಾನವನ ಕಾಲಿನ ಎಲುಬುಗಳು  ಪತ್ತೆಯಾಗಿವೆ. ಸ್ಥಳೀಯ ನಿವಾಸಿ ಸುರೇಶ ಮೇರಾ ಎಂಬುವವರು ಒಣಕಟ್ಟಿಗೆ ಆರಿಸಲು ಹೋದ ಸಂದರ್ಭ ಈ ಮೂಳೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಪೊಲೀಸರು ಪರಿಶೀಲಿಸಿದಾಗ ಅದು ಮಾನವನ ಮೂಳೆ ಎನ್ನುವುದು ಖಚಿತವಾಗಿದೆ. 
ಸಾಂದರ್ಭಿಕ  ಚಿತ್ರ
ಕಳೆದ  ವರ್ಷದ ಜುಲೈನಲ್ಲಿ ಸುರೇಶ ಮೇರಾ ಅವರ ಸಹೋದರ ಆನಂದ ಮೇರಾ ಎಂಬುವವರು ಕಾಣೆಯಾಗಿದ್ದರು. ಆನಂದ ಮೇರಾ ಇದೇ ಪರಿಸರದಲ್ಲಿ ಓಡಾಡಿರುವ ಹಿನ್ನೆಲೆಯಲ್ಲಿ ಅವರದೇ ಮೂಳೆಗಳು ಪತ್ತೆಯಾಗಿರುವ ಸಾಧ್ಯತೆಯಿದೆ  ಎಂದು ಸುರೇಶ್ ಶಂಕಿಸಿದ್ದಾರೆ. ಅಲ್ಲದೆ ಈ ಹಿಂದೆ ಆನಂದ ಮೇರಾ ಸಾಕಷ್ಟು  ಸಂದರ್ಭದಲ್ಲಿ ವಾರಗಟ್ಟಲೆ ಕಾಡಿನಲ್ಲಿ ಹೋಗಿ ವಾಸವಾಗಿರುತ್ತಿದ್ದರು. ಕಾಡಿನಲ್ಲಿ ಮಲಗಿರುವಾಗ ಕಾಡುಪ್ರಾಣಿಗಳ ದಾಳಿಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ . 
ಸುರೇಶ್ ಕೋರಿಕೆಯ ಮೇರೆಗೆ ಪೊಲೀಸರು ಮೂಳೆಗಳನ್ನು ಡಿ ಎನ್ ಎ ಪರೀಕ್ಷೆಗೆ ರವಾನಿಸಿದ್ದು, ಪರೀಕ್ಷಾ ವರದಿ ಬಂದ ಮೇಲಷ್ಟೇ ಇದು ಆನಂದನ ಮೂಳೆಗಳೇ ಅಥವಾ ಇನ್ನಾರದೋ ಎಂದು ದೃಢಪಡಲಿದೆ. 
  

 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget