ಉಡುಪಿ, ಸೆ,14: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ವೈದ್ಯರು ಸೆಪ್ಟೆಂಬರ್ 21 ರಿಂದ ಮುಷ್ಕರ ಹೂಡಲಿದ್ದಾರೆ.
"ಕಳೆದ 12 ವರುಷಗಳಿಂದ ವೈದ್ಯಾಧಿಕಾರಿಗಳು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳಿಗೆ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೂ ಸರಕಾರ ಇತ್ತ ಕಡೆ ಗಮನ ಹರಿಸಿಲ್ಲ. ಹಾಗಾಗಿ ಸೆಪ್ಟೆಂಬರ್ 15 ರ ನಂತರ ಹಂತಹಂತವಾಗಿ ಸೇವೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದೇವೆ. ಕೊರೋನಾ ವರದಿ ಸಲ್ಲಿಕೆ ಸೇರಿದಂತೆ ವಿವಿದ ಸೇವೆಗಳನ್ನು ನಿಲ್ಲಿಸಲಿದ್ದೇವೆ. ಸೆಪ್ಟೆಂಬರ್ 20 ರ ತನಕವೂ ಸರಕಾರ ಪ್ರತಿಕ್ರಿಯಿಸದಿದ್ದಲ್ಲಿ , ಸೆಪ್ಟೆಂಬರ್ 21 ರ ನಂತರ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲ ಸೇವೆಗಳನ್ನು ರದ್ದುಗೊಳಿಸಲಿದ್ದೇವೆ. ಸೆಪ್ಟೆಂಬರ್ 22 ರಂದು ಬೆಂಗಳೂರು ಚಲೋ ಪ್ರತಿಭಟನೆಯು ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ ಎಚ್ ಪ್ರಕಾಶ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಏಳನೇ ವೇತನ ಆಯೋಗದ ನಿಯಮದಂತೆ ಸಂಬಳ ನೀಡಲಾಗುತ್ತದೆ. ಆದ್ರೆ ಸರಕಾರಿ ಆಸ್ಪತ್ರೆಗಳಲ್ಲಿ ಆ ನಿಯಮಾವಳಿಗಳಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಸಂಬಳ ಸಿಗುವ ಕಾರಣ, ಯುವ ವೈದ್ಯರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗುತ್ತಿದೆ ಎಂದು ಡಾ ಪ್ರಕಾಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ ಕೆ ನರಸಿಂಹ ನಾಯಕ್, ಡಾ ಉಮೇಶ್ ನಾಯಕ್ , ಡಾ ಗೋಪಾಲ್ ಎಸ್ ಜಿ , ರಂಜಿತ್
ಹಾಗು ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು.
ಹಾಗು ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು.
Post a comment