ಕಾರ್ಕಳ: ಇಂಜಿನಿಯರ್ಸ್ ಡೇ ಆಚರಣೆ-Times Of Karkala

ಕಾರ್ಕಳ,ಸೆ,16 :"ವ್ಯಕ್ತಿತ್ವ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯ, ಈ ಮೂಲಕ ನಮ್ಮ ಪ್ರಧಾನಿಯವರ ಸಂಕಲ್ಪದಂತೆ ಭಾರತವು ಆತ್ಮ ನಿರ್ಭರತೆಯನ್ನು ಪಡೆಯಬಲ್ಲುದು"ಎಂದು ವಾಗ್ಮಿ ಶ್ರೀ ಕಾಂತ್ ಶೆಟ್ಟಿ  ಕರೆ ಕೊಟ್ಟರು.

ಅವರು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್, ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ  ನಡೆದ 'ಇಂಜಿನಿಯರ್ಸ್ ಡೇ' ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್, ಕಾರ್ಕಳ ಇದರ ಅಧ್ಯಕ್ಷರಾದ ರೊ.ಹಿತೇಶ ಶೆಟ್ಟಿ ಇವರು ವಹಿಸಿ ಸಮಾಜಕ್ಕೆ  ಇಂಜಿನಿಯರ್ಸ್ ಗಳ ಅಗತ್ಯತೆ ಹಾಗೂ ಕೊಡುಗೆಗಳನ್ನು ವಿವರಿಸಿದರು.ಇಂಜಿನಿಯರ್ಸ್ ಅಸೋಸಿಯೇಶನ್ ನ ಕಾರ್ಯದರ್ಶಿ  ಪ್ರಮಲ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು.ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ರೊಟೇರಿಯನ್ ಪ್ರಶಾಂತ್ ಬೆಳಿರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ  ರೊ. ಡಾ.ಎಸ್.ಕೆ.ಮಹದೇವೇ ಗೌಡ ದಂಪತಿಗಳನ್ನು 'ಗೋಲ್ಡನ್ ಇಂಜಿನಿಯರ್ಸ್ ಅವಾರ್ಡ್' ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಆಶಿಷ್  ಪ್ರಾರ್ಥನಾ ಗೀತೆ ಹಾಡಿದರು.ಶ್ರೀ ಗಿರೀಶ್  ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.ಕಾರ್ಕಳ ರಾಕ್ ಸಿಟಿ ಕಾರ್ಯದರ್ಶಿ ರೊ.ಗಣೇಶ ಬರ್ಲಾಯ ಇವರು ಧನ್ಯವಾದ ಸಲ್ಲಿಸಿದರು.

 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget