ಮಂಗಳೂರು ,ಸೆ,20: ನಾಳೆ(21.09.20) ನಡೆಯಬೇಕಿದ್ದ ಅಂತಿಮ ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ತರಗತಿಗಳ ಪರೀಕ್ಷೆಯನ್ನು ಮಳೆಯ ಕಾರಣಕ್ಕಾಗಿ ಮುಂದೂಡಲಾಗಿದೆ. ಮಂಗಳೂರು ವಿ ವಿ ಯ ಅಧೀನಕ್ಕೆ ಒಳಪಟ್ಟ ಉಡುಪಿ, ದಕ್ಷಿಣ ಕನ್ನಡ ಹಾಗು ಕೊಡಗು ಜಿಲ್ಲೆಗಳಲ್ಲಿನ ಕಾಲೇಜುಗಳಿಗೆ ಇದು ಅನ್ವಯವಾಗುತ್ತದೆ. ಮುಂದೂಡಲ್ಪಟ್ಟ ಪರೀಕ್ಷೆಯ ದಿನಾಂಕವನ್ನು ವಿವಿ ಸದ್ಯದಲ್ಲೇ ತಿಳಿಸುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಉಳಿದಂತೆ ಎಲ್ಲಾ ಪರೀಕ್ಷೆಗಳು ನಿಗದಿಪಡಿಸಿದ ದಿನಾಂಕದಂದು ನಡೆಯುತ್ತದೆ.
ಸಾಂದರ್ಭಿಕ ಚಿತ್ರ
Post a comment