ಫಿಟ್ ಇಂಡಿಯಾ ಬೈಸಿಕಲ್ ಜಾಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ-Times Of Karkala

ಕಾರ್ಕಳ,ಸೆ,7:ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಯುವಕ  ಮಂಡಲ, ಸಾಣೂರು ಇದರ ಆಶ್ರಯದಲ್ಲಿ   ಫಿಟ್ ಇಂಡಿಯಾ ಬೈಸಿಕಲ್ ಜಾಥಾ ಸರಣಿ ಕಾರ್ಯಕ್ರಮಕ್ಕೆ, ಸರ್ಕಾರದ ಮುಖ್ಯ ಸಚೇತಕರು ಹಾಗೂ  ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ  ಶ್ರೀ ವಿ ಸುನಿಲ್ ಕುಮಾರ್ ಚಾಲನೆ ನೀಡಿದರು.

ಕಾರ್ಯಕ್ರಮ   ಉದ್ಘಾಟಿಸಿ  ಮಾತನಾಡಿದ ಶಾಸಕರು,  ವ್ಯಾಯಾಮದ  ಜೊತೆಗೆ ನಿರಂತರವಾಗಿ ಸೈಕ್ಲಿಂಗ್  ಕೂಡ ಆರೋಗ್ಯ   ಮತ್ತು  ಮನಸ್ಸಿನ  ಏಕಾಗ್ರತೆಯ  ಜೊತೆಗೆ  ಮಾನಸಿಕ  ಹಾಗೂ ಶಾರೀರಿಕವಾಗಿ ಸದೃಢವಾಗಲು ಸಹಕಾರಿ ಎಂದರು. ಮುಖ್ಯ  ಅತಿಥಿಯಾಗಿ  ಆಗಮಿಸಿದ್ದ ಕೆ. ಎಮ್. ಎಫ್ ನಿರ್ದೇಶಕ ಸಾಣೂರು  ನರಸಿಂಹ ಕಾಮತ್, ಸದಾ ಚಟುವಟಿಕೆಯಿಂದ  ಇರುವ ಸಾಣೂರು ಯುವಕ ಮಂಡಲದ ತಂಡ ಫಿಟ್  ಇಂಡಿಯಾ  ಬೈಸಿಕಲ್  ಜಾಥಾ  ಮತ್ತು   ಇತರ  ಸರಣಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಿದೆ ಎಂದರು. ಮಂಡಲದ ಅಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಪಂಚಾಯತ್ ಸದಸ್ಯೆ  ಶ್ರೀಮತಿ ದಿವ್ಯಶ್ರೀ ಗಿರೀಶ್ ಅಮೀನ್ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಪ್ರವೀಣ್ ಕೋಟ್ಯಾನ್ ಮಂಡಲದ  ಮಾಜಿ  ಅಧ್ಯಕ್ಷರುಗಳಾದ ಶ್ರೀ ಏಕನಾಥ್ ಪ್ರಭು ಶ್ರೀ ಪ್ರವೀಣ್  ಶೆಟ್ಟಿ ದೇವಾನಂದ ಶೆಟ್ಟಿ  ಮಹೇಶ್ ಕುಮಾರ್ ಜಗದೀಶ್ ಕುಮಾರ್ ಶಂಕರ್ ಶೆಟ್ಟಿ  ಪ್ರಕಾಶ್ ಮಡಿವಾಳ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ರಘುರಾಮ ಶೆಟ್ಟಿ,  ಅನಿಲ್  ರಾಜೇಶ್ ಶುಭಕರ್ ಹರೀಶ್ ರೋಹಿತ್ ಚಂದ್ರಹಾಸ್  ದಿಲೀಪ್ ಪ್ರಶಾಂತ್ ಪ್ರಸನ್ನ ಮುಂತಾದ  ಮಂಡಲದ ಸದಸ್ಯರು   ಉಪಸ್ಥಿತರಿದ್ದರು.  ಮಂಡಲದ ಕಾರ್ಯದರ್ಶಿ ಶ್ರೀ ಮೋಹನ್ ಶೆಟ್ಟಿ ಸರ್ವರನ್ನು  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 


 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget