ಕಾಪು,ಸೆ,16: ಐವರ ತಂಡವೊಂದು ಮಸೀದಿಯ ದರ್ಗಾದ ಬಾಗಿಲು ಒಡೆದು ಅಕ್ರಮವಾಗಿ ಒಳನುಗ್ಗಿ ಕೊವೀಡ್ ನಿಯಮ ಉಲ್ಲಂಘಿಸಿ ಪ್ರಾರ್ಥನೆ ಮಾಡಿ, ಮಸೀದಿಯ ಉಪಾಧ್ಯಕ್ಷರಿಗೆ ಜೀವ ಬೆದರಿಕೆ ಹಾಕಿದ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಪೊಲಿಪು ಜಾಮೀಯ ಮಸೀದಿಯಲ್ಲಿ ಸರಕಾರ ಮತ್ತು ವಕ್ಷ್ ಬೋರ್ಡ್ ಕಮಿಟಿಯ ಎಲ್ಲಾ ಸೂಚನೆಗಳನ್ನು ಪಾಲಿಸಿಕೊಂಡು ನಮಾಜ್ ಮಾಡಿಕೊಂಡು ಬರುತ್ತಿದ್ದು, ಕಳೆದ ಸೆ.11 ರಂದು ಜಮಾತಿಗೆ ಸಂಬಂದಪಟ್ಟ ಆರೋಪಿಗಳಾದ ರಶೀದ್, ಜಲೀಲ್, ಬಶೀರ್ ಜನಪ್ರೀಯ, ಬಶೀರ್ ಕರ್ನಾಟಕ ಹೋಟೆಲ್, ಅಶ್ರಫ್ ರವರುಗಳು ಪೊಲಿಪು ಜಾಮೀಯ ಮಸೀದಿ ಕಮಿಟಿಯವರು ಪಾಲನೆ ಮಾಡುತ್ತಿದ್ದ ಸರಕಾರ ಮತ್ತು ವಕ್ಷ್ ಬೋರ್ಡ್ನ ಸೂಚನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೇ ತಂಡ ಮತ್ತೆ ಸೆ. 14 ರಂದು ಮಸೀದಿಗೆ ತಾಗಿಕೊಂಡಿರುವ ದರ್ಗಾದ ಬಾಗಿಲಿನ ಬೀಗವನ್ನು ಮುರಿದು ಅಕ್ರಮವಾಗಿ ಮಸೀದಿ ಒಳಗೆ ಹೋಗಿ ಕೋವಿಡ್-19 ಸೂಚನೆಯನ್ನು ಪಾಲಿಸದೇ ಪ್ರಾರ್ಥನೆ ಮಾಡಿ, ಕಮಿಟಿಯ ಉಪಾಧ್ಯಕ್ಷ ಅಮೀರ್ ಹಂಝ ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ.
ಮಾತ್ರವಲ್ಲದೆ ನಿಮ್ಮ ಸೂಚನೆಗಳನ್ನು ಇನ್ನು ಪಾಲಿಸಲು ಸಾಧ್ಯವಿಲ್ಲ ನಾವು ಅದಕ್ಕೆ ವಿರುದ್ದವಾಗಿ ನಮಾಜ್ ಮಾಡುತ್ತೇವೆ ತಾಕತ್ತಿದ್ದರೇ ನಿಲ್ಲಿಸಿ, ಎಂದು ಸವಾಲು ಹಾಕಿರುವುದಾಗಿ ಕಾಪು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Post a comment