ಐ ಪಿ ಎಸ್ ಅಧಿಕಾರಿ ಆರ್ ಪಿ ಶರ್ಮಗೆ ಪ್ರಮಾದವಶಾತ್ ಬಿದ್ದ ಗುಂಡೇಟು-Times Of Karkala
ಬೆಂಗಳೂರು, ಸೆ 3: ಸರ್ವಿಸ್ ರಿವಾಲ್ವರ್ ಕ್ಲಿನ್ ಮಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ತೀವ್ರ ಗಾಯಗೊಂಡು ಹಿರಿಯ ಐ ಪಿ ಎಸ್ ಅಧಿಕಾರಿ ಆರ್ ಪಿ ಶರ್ಮ(೫೯) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬುಧವಾರ ಸಂಜೆ ಕೊತ್ತೂರಿನಲ್ಲಿರುವರ ಅವರ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರೀಗ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಆಕಸ್ಮಿಕ ಎನ್ನಲಾಗಿದ್ದು, ಎರಡು ಗುಂಡೇಟು ತಗುಲಿದ ಶರ್ಮ ತಮ್ಮ ಕೋಣೆಯಲ್ಲಿ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಇದನ್ನು ಕಂಡ ಮಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದಳು ಎನ್ನಲಾಗಿದೆ.
ಇದು ಯಾವುದೇ ಸಂಚಿನಿಂದ ನಡೆದ ಫೈರಿಂಗ್ ಅಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
Post a comment