ಹೆಬ್ರಿ:ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸ್ಥಾಪಿಸಿದ ಅನಾಥ ನಿಧಿಯಿಂದ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯಕ್ಕೆ ಸುಮಾರು 12000 ಆರ್ಥಿಕ ನೆರವು ಮತ್ತು ಬಟ್ಟೆ, ತಿಂಡಿ ತಿನಸನ್ನು ಬುಧವಾರ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಭಾರ್ಗವಿ ಆರ್. ಐತಾಳ್ ಹಸ್ತಾಂತರಿಸಿದರು.
ಅನಾಥಾಲಯದ ಮುಖ್ಯಸ್ಥ ಕೂರಾಡಿ ಪ್ರಶಾಂತ ಪೂಜಾರಿ ನೆರವು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ದಿನಕರ ಪ್ರಭು, ಕಾಯðದಶಿð ರಾಮಚಂದ್ರ ಭಟ್, ಕೋಶಾಧಿಕಾರಿ ರಘುರಾಮ ಶೆಟ್ಟಿ, ಡಾ.ರಾಮಚಂದ್ರ ಐತಾಳ್, ಪೂರ್ವಾಧ್ಯಕ್ಷ ರಮೇಶ ಆಚಾರ್ಯ, ಸೀತಾನದಿ ಚಂದ್ರಶೇಖರ ಶೆಟ್ಟಿ ಮತ್ತಿತರರು ಇದ್ದರು.
Post a comment