ಹೆಬ್ರಿ:ಜೇಸಿಐ ಸಪ್ತಾಹ ಸ್ನೇಹ ಸೇತು ಸಂಪನ್ನ-Times of karkala

ಹೆಬ್ರಿ:"ಈಗ ಎಲ್ಲೆಡೆಯು ವಿಧ್ಯೆಯ ಪ್ರದರ್ಶನ ನಡೆಯುತ್ತಿದೆ, ನಿಜವಾಗಿ ವಿಧ್ಯೆಯ ದರ್ಶನವಾಗಬೇಕಿದೆ, ವಿಧ್ಯೆ ಇರುವುದೇ ಗುಣ ಸಂಪಾದನೆಗೆ ಹಣ ಸಂಪಾದನೆಗೆ ಅಲ್ಲ ಎಂದು ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.

ಸ್ನೇಹ ಸೇತು - ಜೇಸಿ ಸಪ್ತಾಹದ ಸಂಪನ್ನ ಸಂಭ್ರಮದಲ್ಲಿ  ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಸಹಿತ ಸಾಧಕರನ್ನು ಗೌರವಿಸಲಾಯಿತು


ಅವರು ಹೆಬ್ರಿ ಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಶನಿವಾರ ಹೆಬ್ರಿ ಜೇಸಿಐ ವತಿಯಿಂದ ಜೇಸಿರೆಟ್‌ ಮತ್ತು ಯುವ ಜೇಸಿ ಸಹಕಾರದಲ್ಲಿ ಒಂದು ವಾರಗಳ ಕಾಲ ನಡೆದ ಸ್ನೇಹ ಸೇತು - ಜೇಸಿ ಸಪ್ತಾಹದ ಸಂಪನ್ನ ಸಂಭ್ರಮದಲ್ಲಿ  ಗೌರವ ಸ್ವೀಕರಿಸಿ ಮಾತನಾಡಿದರು.

ಪತ್ರಿಕೇ ಮತ್ತು ದೂರದರ್ಶನದಿಂದಾಗಿ  ವಿಧ್ಯಾವಂತ ಯುವಕರ ಅವಿಧ್ಯಾವಂತರಾಗುತ್ತಿರುವುದು ನಮ್ಮ ಮುಂದಿನ ದುರಂತ ಎಂದು ಅಂಬಾತನಯ ಮುದ್ರಾಡಿ ಹೇಳಿದರು.ಪರಿಣಾಮಕಾರಿ ಭಾಷಣ ಕಲೆ, ಚಿತ್ರಕಲಾ ಸ್ಪಧೆð, ಆರೋಗ್ಯ ಮಾಹಿತಿ ಶಿಬಿರ, ವಿಧ್ಯಾಥಿðಗಳಿಗೆ ಮಾನಸಿಕ ಆರೋಗ್ಯ ಮಾಹಿತಿ ಮತ್ತು ಜೇಸಿಐ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ದತ್ತಿನಿಧಿ ಪುರಸ್ಕಾರ ನಡೆಯಿತು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರಿಗೆ ಹಿರಿಯ ನಾಗರಿಕ ಪ್ರಶಸ್ತಿ, ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀನಿವಾಸ ಭಂಡಾರಿ ಮತ್ತು ದಿನೇಶ್‌ ಶೆಟ್ಟಿಗಾರ್‌ ಅವರಿಗೆ ಸಾಧಕ ಶಿಕ್ಷಕ ಪ್ರಶಸ್ತಿ, ಜೇಸಿಐ ಪೂವಾðಧ್ಯಕ್ಷೆ ವೀಣಾ ರಾಮಚಂದ್ರ ಭಟ್‌ ಅವರಿಗೆ ಕಮಲಪತ್ರ ಮತ್ತು ಶಿಲ್ಪಿ ಜವðತ್ತು ಅನಿಲ್‌ ಪೂಜಾರಿ ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಅಧ್ಯಕ್ಷತೆ ವಹಿಸಿದ ಹೆಬ್ರಿ ಜೇಸಿಐ ಅಧ್ಯಕ್ಷೆ ಸುನೀತಾ ಅರುಣ್‌ ಹೆಗ್ಡೆ ಜೇಸಿಐಯ ಮೂಲಕ ಸೇವೆ ಮಾಡಲು ಅವಕಾಶ ನೀಡಿ ಸಹಕರಿಸಿದ ಸವðರಿಗು ಕೃತಜ್ಞತೆ ಸಲ್ಲಿಸಿದರು. 

ಧಾರ್ಮಿಕ ಮುಖಂಡ ಹೆಬ್ರಿ ಭಾಸ್ಕರ ಜೋಯಿಸ್‌, ಜೇಸಿಐ ವಲಯ ಉಪಾಧ್ಯಕ್ಷ ಸಮದ್‌ ಖಾನ್‌, ಜೇಸಿಐ ಪೂರ್ವಾಧ್ಯಕ್ಷ ಪ್ರಾಣೇಶ್‌, ನಾಗೇಂದ್ರ, ಕಾರ್ಯದರ್ಶಿ ನಾಗರಾಜ್‌ ಶೆಟ್ಟಿಗಾರ್‌, ಜೇಸಿರೆಟ್‌ ಅಧ್ಯಕ್ಷೆ ಸುಪ್ರೀತಾ ಪಿ.ಶೆಟ್ಟಿ, ಯುವಜೇಸಿ ಅಧ್ಯಕ್ಷ ಆಕಾಶ್‌, ಸಪ್ತಾಹದ ನಿದೇðಶಕರಾದ ಬಾಲರಾಜ್‌, ಮಂಜುನಾಥ ಕುಲಾಲ್‌ ಇದ್ದರು. 

 

 

ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget