ಹೆಬ್ರಿ ,ಸೆ,20: ಉಡುಪಿ ಜಿಲ್ಲಾ ಕಾಂಗ್ರೆಸ್ , ಹೆಬ್ರಿ ಬ್ಲಾಕ್ ಕಾಂಗ್ರೆಸ್ ಹಾಗೂ ಮುದ್ರಾಡಿ ಗ್ರಾಮೀಣ ಕಾಂಗ್ರೆಸ್ ಸಹಯೋಗದಲ್ಲಿ ಹೆಬ್ರಿ ನಾರಾಯಣ ಗುರು ಸಭಾಭವನದಲ್ಲಿ ನಡೆದ 'ಗ್ರಾಮದಲ್ಲೊಂದು ದಿನ' ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ನಾಯಕ ಹರ್ಷ ಮೊಯ್ಲಿಯವರು ನೆರವೇರಿಸಿದರು.
ನಂತರ ಹಿರಿಯ ಕಾಂಗ್ರೆಸಿಗರಾದ ಶೀನ ಪೂಜಾರಿ ಹೆಬ್ರಿ ,ಶಿವರಾಮ್ ಪೂಜಾರಿ ನಾಡ್ಪಾಲ್, ಸಾಧು ಮಡಿವಾಳ ಹೆಬ್ರಿ, ಅಪ್ಪು ಸೇರಿಗಾರ್ ಮುದ್ರಾಡಿ, ರಾಜು ಮೇಸ್ರಿ ಮುದ್ರಾಡಿ ಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಕೆ.ಪಿ.ಸಿ.ಸಿ ಉಸ್ತುವಾರಿಗಳಾದ ಉಮ್ಮರ್ ಫಾರೂಖ್ & ಭರತ್ ಮುಂಡೋಡಿ ಯುವಕಾಂಗ್ರೆಸ್ ರಾಜ್ಯ ಕರ್ಯರ್ಶಿ ರವಿಶಂಕರ್ ಶೇರಿಗಾರ್ ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿ ಉದಯ.ವಿ.ಶೆಟ್ಟಿ ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಸುಧಾಕರ್ ಕೋಟ್ಯಾನ್ & ನೀರೆ ಕೃಷ್ಣ ಶೆಟ್ಟಿ ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಆಚಾರ್ಯ ,ಐ.ಟಿ ಸೆಲ್ ಅಧ್ಯಕ್ಷ ಸಂತೋಷ್ ಕನ್ಯಾನ ಹಾಗು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಮತ್ತು ಕಾರ್ಕಳ ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚೈತ್ರಾ ಕಬ್ಬಿನಾಲೆ ಕಾರ್ಯಕ್ರಮ ನಿರೂಪಿಸಿದರು.
Post a comment