ಹೆಬ್ರಿ, ಸೆ 7:ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಅಜೆಕಾರು, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆದಿಗ್ರಾಮೋತ್ಸವ ಸಮಿತಿಯ ಸಹಕಾರದೊಂದಿಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣಾ ಗೌರವ ಕಾರ್ಯಕ್ರಮದಲ್ಲಿ ಶನಿವಾರ ನಿವೃತ್ತ ಮುಖ್ಯ ಶಿಕ್ಷಕ ಎ.ಶಾಂತಿರಾಜ ಹೆಗ್ಡೆ ಮತ್ತು ಮಕರಂದ ಎಸ್.ಜೈನ್ ಅವರನ್ನು ಕೊಂಬಗುಡ್ಡೆ ನಿವಾಸದಲ್ಲಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಆದಿಗ್ರಾಮೋತ್ಸವದ ಗೌರವಾಧ್ಯಕ್ಷ, ಖ್ಯಾತ ವೈದ್ಯ ಡಾ. ಸಂತೋಷ್ ಕುಮಾರ್ ಶೆಟ್ಟಿ, ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸುವ ಶಿಕ್ಷಕ ವೃಂದವನ್ನು ಸದಾ ಗೌರವಿಸಬೇಕು. ವಿಶ್ರಾಂತ ಶಿಕ್ಷಕರ ಕೊಡುಗೆಯನ್ನು ನೆನೆಪಿಸಿಕೊಳ್ಳುವುದು ಸತ್ಸಂಪ್ರದಾಯ ಎಂದುಅಭಿಪ್ರಾಯ ಪಟ್ಟರು.
ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಬಳಿಕ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿಶ್ರಾಂತರಾಗಿರುವ ಎ.ಶಾಂತಿರಾಜ ಹೆಗ್ಡೆ ಮತ್ತು ಮಕರಂದ ಎಸ್.ಜೈನ್ ಅವರನ್ನು ಕೊಂಬಗುಡ್ಡೆ ನಿವಾಸದಲ್ಲಿ ಸಮಾಜ ಸೇವಕ ಗೋಪಿನಾಥ್ ಭಟ್ ಮುನಿಯಾಲು ಮತ್ತು ನಿವೃತ್ತ ಮುಖ್ಯ ಶಿಕ್ಷಕ ಮೌರೀಸ್ ತಾವ್ರೋ ಗೌರವಿಸಿದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷರಾದ ಸಾಹಿತಿ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿ ಹಿರಿಯ ಅನುಭವವನ್ನು ಆಧರಿಸಿ ಬದುಕನ್ನು ಕಟ್ಟುವ ಕೆಲಸ ಆಗ ಬೇಕಿದೆ ಎಂದರು.
ಸಾಹಿತಿ, ಅಜೆಕಾರು ಗ್ರಾಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪ್ರೇಮಾ.ವಿ ಸೂರಿಗ, ರಾಧಾನಾಯಕ್ ಹೈಸ್ಕೂಲಿನ ಮಾಜಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪಿ.ಹಾಜಿ ಎಣ್ಣೆಹೊಳೆ ಮತ್ತು ಕವಿ ಬಾಲಕೃಷ್ಣ ಹೆಗ್ಡೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು, ಸಮಿತಿ ಸದಸ್ಯರಾದ ಸಂತೋಷ್ ಜೈನ್ ಎಣ್ಣೆಹೊಳೆ, ಶಶಿಕಲಾ ಜಯಂತ್ ಬೆಳುವಾಯಿ ಉಪಸ್ಥಿತರಿದ್ದರು.
ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಪ್ರಶಸ್ತಿ ಪುರಸ್ಕೃತೆ ಶೃಜನ್ಯ ಜೆ,ಕೆ ಬೆಳುವಾಯಿ ಅವರ ಗುರು ನಮನ ಭರತನಾಟ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
Post a comment