ಕಾಪು: ಅಕ್ರಮ ಕಸಾಯಿಖಾನೆಗೆ ದಾಳಿ:ಇಬ್ಬರು ವಶಕ್ಕೆ-Times Of Karkala

ಕಾಪು, ಸೆ,12: ಕಾಪುವಿನ ಮಲ್ಲಾರು ಗ್ರಾಮದ ಕುಡ್ತಿಮಾರ್ ಖೈರುನ್ನೀಸಾ ಕಾಟೇಜ್ ಹೆಸರಿನ ಮನೆಯ ಕಾಂಪೌಂಡ್ ಅನ್ನೇ ಅಕ್ರಮ ಕಸಾಯಿಖಾನೆಯನ್ನಾಗಿಸಿಕೊಂಡು ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದಾಗ, ದಾಳಿ ಮಾಡಿದ ಕಾಪು ಎಸ್ ಐ ರಾಜಶೇಖರ್ ಬಿ ಎನ್ ತಂಡ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದೆ. 

ಖಚಿತ ಮಾಹಿತಿ ಪಡೆದು ಉಡುಪಿ ಎಸ್ ಪಿ ವಿಷ್ಣುವರ್ಧನ್ ಮಾರ್ಗದರ್ಶನದಂತೆ ಮುಂಜಾನೆ ದಾಳಿ ನಡೆಸಿದಾಗ ಕಾಂಪೌಂಡ್ ಒಳಗೆ ಎರಡು ಕಾರುಗಳನ್ನು ನಿಲ್ಲಿಸಿಕೊಂಡು ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದು, ಪೊಲೀಸರನ್ನು ಕಂಡು ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಸೆರೆ ಸಿಕ್ಕರು. ಸೆರೆ ಸಿಕ್ಕವರ ಪೈಕಿ ಒಬ್ಬ ಉದ್ಯಾವರ ಗುಡ್ಡೆಯಂಗಡಿಯ ನಿವಾಸಿ ಮೊಹಮ್ಮದ್ ತಾವ , ಇನ್ನೊಬ್ಬ ಮೂಳೂರು ಮುನ್ನಿ ಸೆಂಟರ್ ನ ಹಿಂಬದಿ ನಿವಾಸಿ ಮೊಯಿದಿನಬ್ಬ. ಆರೋಪಿಗಳು ತಿಳಿಸಿದಂತೆ ಕಾರುಗಳಲ್ಲಿ ಮೂಡುಬೆಟ್ಟು ಪರಿಸರದಿಂದ ದನಗಳನ್ನು ಕದ್ದು ಸಾಗಿಸಿ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದರು. ಸ್ಥಳದಲ್ಲಿದ್ದ ಎರಡು  ಕಾರು,ಒಂದು ಸ್ಕೂಟರ್, ಮೊಬೈಲ್ ಗಳು ಹಾಗೂ ಜೀವಂತ ದನಕರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾದ ಆರೋಪಿಗಳಾದ ಶಮೀರ್ ಹಾಗು ನೌಶಾದ್ ಬಂಧನಕ್ಕೆ ಪೊಲೀಸರು ಬಲೆ  ಬೀಸಿದ್ದಾರೆ.  ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget