ಕಾರ್ಕಳ,ಸೆ,12 : ಕಾರ್ಕಳದ 26 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 168 ಕೋರೋಣ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಉಡುಪಿ ತಾಲೂಕಿನಲ್ಲಿ 96, ಕುಂದಾಪುರದಲ್ಲಿ 44 ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
1584 ಮಂದಿಯ ಗಂಟಲು ದ್ರವ ಸಂಗ್ರಹಿಸಲಾಗಿದ್ದು ಅದರಲ್ಲಿ 1320 ನೆಗೆಟಿವ್ ಪ್ರಕರಣಗಳು ವರದಿಯಾಗಿವೆ.
ಸೋಂಕಿತರಲ್ಲಿ ರೋಗ ಲಕ್ಷಣವಿರುವ 62 ಪುರುಷರು, 34 ಮಹಿಳೆಯರು, ರೋಗ ಲಕ್ಷಣವಿಲ್ಲದ 40 ಪುರುಷರು ಹಾಗೂ 32 ಮಹಿಳೆಯರಿದ್ದಾರೆ. ಕುಂದಾಪುರದ 73 ವರ್ಷದ ಹಾಗು 63 ವರ್ಷದ ವೃದ್ದರಿಬ್ಬರು ಮೃತಪಟ್ಟಿದ್ದಾರೆ.
Post a comment