ಕಾರ್ಕಳ,ಸೆ,20: ಕಾರ್ಕಳ ತಾಲೂಕಿನಾದ್ಯಂತ ಶನಿವಾರ ಬೆಳಗ್ಗಿನಿಂದ ನಿರಂತರ ಮಳೆ ಸುರಿಯುತ್ತಿದೆ.
ನದಿ, ಹಳ್ಳ ತೊರೆಗಳು ಜಲಾವೃತಗೊಂಡಿವೆ. ಕಾರ್ಕಳ 277.44ಮಿ ಮೀ , ಇರ್ವತೂರು 221.8 ಮಿ ಮೀ , ಅಜೆಕಾರು 309 ಮೀ ಮೀ ಬೆಳಿಂಜೆ 191.2ಮಿ ಮೀ ,ಸಾಣೂರು 210 ಮೀ ಮೀ, ಕೆದಿಂಜೆ 288.6, ಮುಳಿಕರು 414.2 ಮೀ ಮೀ ಹಾಗು ಕೆರ್ವಾಶೆಯಲ್ಲಿ 305 ಮೀ ಮೀ ಮಳೆಯಾಗಿದೆ.
ಕಾರ್ಕಳದಲ್ಲಿ ಎಣ್ಣೆಹೊಳೆ, ಹೆರ್ಮುಂಡೆ ಪ್ರದೇಶದ ಹಲವಾರು ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ರಾಜ್ಯ ಹೆದ್ದಾರಿ ಕಾರ್ಕಳ – ಅಜೆಕಾರು ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Post a comment