ಕಸ್ತೂರಿರಂಗನ್‌ ವರದಿಯ ಅತೀ ಸೂಕ್ಷ್ಮ ಪ್ರದೇಶ 100ಮೀಟರ್‌ಗೆ ಸೀಮಿತಗೊಳಿಸಲು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಮನವಿ-Times Of Karkala

ಉಡುಪಿ,ಸೆ,11 :ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಸ್ತೂರಿರಂಗನ್‌ ವರದಿಯ ಅತೀ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 1 ಕೀಮಿ ವ್ಯಾಪ್ತಿಗೆ ನಿಗದಿಗೊಳಿಸಿ  ಪರಿಸರ ಅತೀ ಸೂಕ್ಷ್ಮ ಪ್ರದೇಶ ಎಂದು 2020ರ ಜುಲೈ ತಿಂಗಳಿನಲ್ಲಿ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು ಇದರಿಂದ ಅರಣ್ಯ ವಾಸಿಗಳು, ಅರಣ್ಯದಂಚಿನ ವಾಸಿಗಳು, ರೈತರು ಮತ್ತು ಮಲೆಕುಡಿಯ ಸಹಿತ ಬುಡಕಟ್ಟು ಸಮುದಾಯದ ಸಹಿತ ಜನಸಾಮಾನ್ಯರಿಗೆ ಅತೀ ಸಮಸ್ಯೆಯಾಗುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶದ ಮಿತಿಯನ್ನು ಕೇವಲ 100 ಮೀಟರ್‌ ಗೆ ಸೀಮಿತಗೊಳಿಸುವಂತೆ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನೇತ್ರತ್ವದಲ್ಲಿ ಗುರುವಾರ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.ಈ ಹಿಂದೆ ಅತೀ ಸೂಕ್ಷ್ಮ ವಲಯ 10 ಕೀಮಿ ಎಂದು ನಿಗದಿಯಾಗಿತ್ತು, ಈಚೆಗೆ ಅದನ್ನು 1 ಕೀಮಿಗೆ ಇಳಿಸಲಾಗಿತ್ತು. 1 ಕೀಮಿ ವ್ಯಾಪ್ತಿ ಇದ್ದರೂ ಸಮಸ್ಯೆ ಆಗುತ್ತದೆ. ಇದರಿಂದ ಉಡುಪಿ ಜಿಲ್ಲೆ ಹೆಬ್ರಿ ಕಾರ್ಕಳ, ಬೈಂದೂರು,ಕುಂದಾಪುರ ತಾಲ್ಲೂಕಿನಲ್ಲಿ ಅಕ್ರಮ ಸಕ್ರಮ ಮಂಜೂರಾತಿ, ಮನೆ, ಜಾಗ ಮಾರಾಟ ಸಹಿತ ಹಲವು ತೊಂದರೆ ಆಗುತ್ತದೆ. ವಿದ್ಯುತ್‌ ಸಂಪರ್ಕ, ಮನೆ ನಂಬ್ರ ಸಹಿತ ಸರ್ಕಾ ರದ ಬಹುತೇಕ ಸವಲತ್ತುಗಳು ಜನರಿಗೆ ಇದರಿಂದ ದೊರಕುತ್ತಿಲ್ಲ.  ಸಾವಿರಾರು ಕುಟುಂಬಗಳು ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಮಂಜುನಾಥ ಪೂಜಾರಿ ಮನವಿಯಲ್ಲಿ ತಿಳಿಸಿದ್ದಾರೆ. ಹೆಬ್ರಿ 1 ಕೀಮಿ ವ್ಯಾಪ್ತಿ ಎಂದರೆ ಹೆಬ್ರಿಯ ಬಸ್‌ ನಿಲ್ದಾಣದ ತನಕ ಬರುತ್ತಿದೆ. ಸರ್ಕಾ ರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಸಿದ್ಧರಾಮಯ್ಯ ಸರ್ಕಾ ರದ ಜನಾಭಿಪ್ರಾಯದ ವರದಿಯನ್ನು ಪರಿಗಣಿಸಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಯುವ ಮುಖಂಡ ಪ್ರದೀಪ್ ಭಂಡಾರಿ ಪ್ರಮುಖರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಕಬ್ಬಿನಾಲೆ ಚಂದ್ರಶೇಖರ ಬಾಯರಿ,ಶಶಿಕಲಾ ಡಿ ಪೂಜಾರಿ ಮುದ್ರಾಡಿ, ಅಶ್ವಿನಿ ಗೌಡ ಮುದ್ರಾಡಿ, ಹೆಬ್ರಿ ಶಂಕರ ಸೇರಿಗಾರ್, ದಿನೇಶ್‌ ಶೆಟ್ಟಿ ಹುತ್ತುರ್ಕೆ ಹೆಬ್ರಿ  ಭಾಗವಹಿಸಿದ್ದರು.

 

ಜಾಹೀರಾತುPost a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget